ಬುಧವಾರ, ಏಪ್ರಿಲ್ 21, 2021
25 °C

ಫುಟ್‌ಬಾಲ್: ಕೆಜಿಎಫ್ ಅಕಾಡೆಮಿಗೆ ಸುಲಭ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಟೀಫನ್ ಮತ್ತು ರಾಜೇಶ್ ತಂದಿತ್ತ ತಲಾ ಮೂರು ಗೋಲುಗಳ ನೆರವಿನಿಂದ ಬಿಇಎಂಎಲ್ ಕೆಜಿಎಫ್ ಸ್ಪೋರ್ಟ್ಸ್ ಅಕಾಡೆಮಿ ತಂಡ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಪಡೆಯಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಜಿಎಫ್ ಅಕಾಡೆಮಿ 8-1 ಗೋಲುಗಳಿಂದ ಬಿಇಎಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು.ಈ ಗೆಲುವಿನ ಮೂಲಕ ಕೆಜಿಎಫ್ ಅಕಾಡೆಮಿ ಪ್ರಶಸ್ತಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿತು. ಏಳು ಪಂದ್ಯಗಳನ್ನು ಆಡಿರುವ ತಂಡ ಒಟ್ಟು 16 ಪಾಯಿಂಟ್ ಹೊಂದಿದೆ. ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದರೆ ಈ ತಂಡ ಕಿರೀಟ ಮುಡಿಗೇರಿಸಿಕೊಳ್ಳಲಿದೆ.ಮತ್ತೊಂದೆಡೆ ಬಿಇಎಲ್ `ಎ~ ಡಿವಿಷನ್‌ಗೆ ಹಿಂಬಡ್ತಿ ಪಡೆಯಿತು. ಈ ತಂಡ ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ.ಆಕರ್ಷಕ ಪ್ರದರ್ಶನ ನೀಡಿದ ಸ್ಟೀಫನ್ (6, 50 ಹಾಗೂ 76ನೇ ನಿಮಿಷ) ಮತ್ತು ರಾಜೇಶ್ (65, 69 ಹಾಗೂ 85ನೇ ನಿಮಿಷ) ಕೆಜಿಎಫ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೆರಡು ಗೋಲುಗಳನ್ನು ಖಲಂದರ್ (37 ಮತ್ತು 41) ತಂದಿತ್ತರು.ಪಂದ್ಯದ ಮೂರನೇ ನಿಮಿಷದಲ್ಲಿ ಸುರೀನ್ ಬಿಇಎಲ್ ತಂಡಕ್ಕೆ ಮುನ್ನಡೆ ತಂದಿತ್ತರು. ಆ ಬಳಿಕ ಕೆಜಿಎಫ್ ಪೂರ್ಣ ಪ್ರಭುತ್ವ ಸಾಧಿಸಿತು.ಎಲ್‌ಆರ್‌ಡಿಇಗೆ ಜಯ: `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಎಲ್‌ಆರ್‌ಡಿಇ 4-1 ಗೋಲುಗಳಿಂದ ಧರ್ಮರಾಜ ಯೂನಿಯನ್ ತಂಡವನ್ನು ಸೋಲಿಸಿತು.ಹ್ಯಾಟ್ರಿಕ್ ಗೋಲು ತಂದಿತ್ತ ಎಸ್. ಕುಮಾರ್ (1, 22 ಹಾಗೂ 70ನೇ ನಿಮಿಷ) ಎಲ್‌ಆರ್‌ಡಿಇ ಗೆಲುವಿನ ರೂವಾರಿ ಎನಿಸಿದರು. ತಂಡದ ಇನ್ನೊಂದು ಗೋಲನ್ನು ಪಿ. ಮಣಿ 78ನೇ ನಿಮಿಷದಲ್ಲಿ ತಂದಿತ್ತರು. ಜಾನ್ ಪೀಟರ್ (73) ಅವರು ಧರ್ಮರಾಜ ತಂಡದ ಸೋಲಿನ ಅಂತರ ತಗ್ಗಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.