ಫುಟ್‌ಬಾಲ್: ಕೆಜಿಎಫ್ ಅಕಾಡೆಮಿ ಚಾಂಪಿಯನ್

ಶುಕ್ರವಾರ, ಜೂಲೈ 19, 2019
24 °C

ಫುಟ್‌ಬಾಲ್: ಕೆಜಿಎಫ್ ಅಕಾಡೆಮಿ ಚಾಂಪಿಯನ್

Published:
Updated:

ಬೆಂಗಳೂರು: ಬಿಇಎಂಎಲ್ ಕೆಜಿಎಫ್ ಸ್ಪೋರ್ಟ್ಸ್ ಅಕಾಡೆಮಿ ತಂಡ ಚೊಚ್ಚಲ ಬಾರಿಗೆ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ್ನು ಗೆದ್ದುಕೊಂಡಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಿರ್ಣಾಯಕ ಲೀಗ್ ಪಂದ್ಯದಲ್ಲಿ ಕೆಜಿಎಫ್ ಅಕಾಡೆಮಿ 3-2 ಗೋಲುಗಳಿಂದ ಎಎಸ್‌ಸಿ ತಂಡವನ್ನು ಮಣಿಸಿತು.ಈ ಗೆಲುವಿನ ಮೂಲಕ ಒಟ್ಟು 22 ಪಾಯಿಂಟ್‌ಗಳೊಂದಿಗೆ ಕೆಜಿಎಫ್ ಅಕಾಡೆಮಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. 20 ಪಾಯಿಂಟ್ಸ್ ಕಲೆಹಾಕಿದ ಎಚ್‌ಎಎಲ್ ಎರಡನೇ ಸ್ಥಾನ ಪಡೆಯಿತು.ಮುರುಗಪ್ಪನ್ (4ನೇ ನಿಮಿಷ), ಅಮೋಸ್ (41) ಮತ್ತು ಸ್ಟೀಫನ್ (42) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು. ಎಎಸ್‌ಸಿ ತಂಡದ ಎರಡೂ ಗೋಲುಗಳನ್ನು ಜೊತಿನ್ ಸಿಂಗ್ (79 ಮತ್ತು 90+4) ತಂದಿತ್ತರು.

2009ರ ಋತುವಿನಲ್ಲಿ ಮೂರನೇ ಸ್ಥಾನ ಪಡೆದುಕೊಂಡದ್ದು ಕೆಜಿಎಫ್ ಅಕಾಡೆಮಿ ತಂಡದ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿತ್ತು.ಬೆಂಗಳೂರು ಮಾರ್ಸ್‌ ಮತ್ತು ಎಸ್‌ಎಐ ನಡುವಿನ `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಯು. ಬಾಬು (41) ಮತ್ತು ಪ್ರತಾಪ್ (42) ಮಾರ್ಸ್‌ ತಂಡಕ್ಕೂ, ಜಯಂತ್ (9) ಹಾಗೂ ಮೊಹಮ್ಮದ್ ಅಬ್ರಾರ್ (63) ಎಸ್‌ಎಐ ತಂಡಕ್ಕೂ ಗೋಲುಗಳನ್ನು ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry