ಫುಟ್ಬಾಲ್: ಕೆನಡಾ ಮಡಿಲಿಗೆ ಕಂಚು
ಲಂಡನ್ (ಎಪಿ): ಮಿಡ್ಫೀಲ್ಡರ್ ಡಯಾನ ಮ್ಯಾಥಿನ್ಸನ್ ಗುರುವಾರ ಕೆನಡಾ ಮಹಿಳಾ ಫುಟ್ಬಾಲ್ ತಂಡದ ಪಾಲಿಗೆ `ನಾಯಕಿ~ಯಾಗಿ ಮೆರೆದರು. ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಅವರು ಒಂದು ಗೋಲು ಗಳಿಸಿದರು. ಈ ಒಂದು ಗೋಲು ಕೆನಡಾಕ್ಕೆ ಕಂಚು ತಂದುಕೊಟ್ಟಿತು.
ಗುರುವಾರ ನಡೆದ ಪಂದ್ಯದಲ್ಲಿ ಕೆನಡಾ 1-0ಗೋಲಿನಿಂದ ಫ್ರಾನ್ಸ್ ಎದುರು ಜಯ ಪಡೆಯಿತು. ದ್ವಿತೀಯಾರ್ಧದ ಆರಂಭದಿಂದಲೂ ಫ್ರಾನ್ಸ್ ಗೋಲು ಗಳಿಸಲು ಪ್ರಬಲ ಹೋರಾಟ ನಡೆಸಿತು. ಆದರೆ, ಎದುರಾಳಿ ಆಟಗಾರ್ತಿಯರು ಅವಕಾಶ ನೀಡಲಿಲ್ಲ. ಮ್ಯಾಥಿನ್ಸನ್ ಎರಡನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.