ಫುಟ್‌ಬಾಲ್: ಗರ್ಜಿಸಿದ ಟೈಗರ್ಸ್

7

ಫುಟ್‌ಬಾಲ್: ಗರ್ಜಿಸಿದ ಟೈಗರ್ಸ್

Published:
Updated:
ಫುಟ್‌ಬಾಲ್: ಗರ್ಜಿಸಿದ ಟೈಗರ್ಸ್

ಬೆಂಗಳೂರು: ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬೈ ಟೈಗರ್ಸ್ ತಂಡದವರು ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಅಂತಿಮ ಹಂತದ ಪಂದ್ಯದಲ್ಲಿ ಮಂಗಳವಾರ 3-0ಗೋಲುಗಳಿಂದ ಕೋಲ್ಕತ್ತದ ಸದರ್ನ್ ಸಮಿತಿ ಎದುರು ಗೆಲುವು ಪಡೆಯಿತು.ಲೀಗ್ ಹಂತದಲ್ಲಿ `ಸಿ' ಗುಂಪಿನಿಂದ ಅಗ್ರಸ್ಥಾನ ಪಡೆದಿದ್ದ ಸದರ್ನ್ ತಂಡ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಭಾರತದ ತಂಡದ ಮಾಜಿ ಸ್ಟೈಕರ್ ಎನ್.ಪಿ. ಪ್ರದೀಪ್ 64ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ದೆಂಬಾ ದಿಖಾತೆ 79ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು. ಹತ್ತು ನಿಮಿಷಗಳ ಅಂತರದಲ್ಲಿ ದಿಖಾತೆ ಮತ್ತೊಂದು ಗೋಲು ತಂದಿತ್ತು ಗೆಲುವಿನ ಅಂತರ ಹೆಚ್ಚಿಸಿದರು.  ದಿನದ ಇನ್ನೊಂದು ಪಂದ್ಯದಲ್ಲಿ ಕೋಲ್ಕತ್ತದ ಭಾವನಿಪುರೆ ಫುಟ್‌ಬಾಲ್ ತಂಡ 1-0ಗೋಲಿನಿಂದ ಶಿಲ್ಲಾಂಗ್ ಎದುರು ಜಯದ ನಗೆ ಬೀರಿತು. 90ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದ ಬಾರ್ತೊ ಗೆಲುವಿನ ರೂವಾರಿ ಎನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry