ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ರೈಲು ಗಾಲಿ ಕಾರ್ಖಾನೆ

7

ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ರೈಲು ಗಾಲಿ ಕಾರ್ಖಾನೆ

Published:
Updated:

ಬೆಂಗಳೂರು: ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ಹಾಗೂ ಸೌತ್ ಯುನೈಟೆಡ್ ತಂಡಗಳ ನಡುವಿನ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯವು 1-1ಗೋಲುಗಳಲ್ಲಿ ಡ್ರಾದಲ್ಲಿ ಅಂತ್ಯ ಕಂಡಿತು.ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೌತ್ ಯುನೈಟೆಡ್‌ನ ಅಮೋಸ್ 35ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ಕೊನೆಯಲ್ಲಿ ಗಾಲಿ ಕಾರ್ಖಾನೆಯ ರಿಜಿಯನ್ ಪೆನಾಲ್ಟಿ ಕಾರ್ನರ್ ಮೂಲಕ 60ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು ಡ್ರಾ ಹಾದಿಗೆ ಕೊಂಡೊಯ್ದರು.`ಎ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜವಾಹರ ಯುನಿಯನ್ ತಂಡ 1-0ಗೋಲಿನಿಂದ ಎಇಒಆರ್‌ಸಿ ವಿರುದ್ಧ ಗೆಲುವು ಸಾಧಿಸಿತು. 50ನೇ ನಿಮಿಷದಲ್ಲಿ ಗೋಲು ತಂದಿತ್ತ ರಾಹುಲ್ ಶೆಟ್ಟಿ ಗೆಲುವಿನ ರೂವಾರಿ ಎನಿಸಿದರು.ಗುರುವಾರದ ಪಂದ್ಯಗಳು: `ಎ' ಡಿವಿಷನ್: ಬೆಂಗಳೂರು ಕಿಕ್ಕರ್ಸ್‌-ಭಾರತ ಕ್ರೀಡಾ ಪ್ರಾಧಿಕಾರ (ಮಧ್ಯಾಹ್ನ 1ಕ್ಕೆ), ಸೂಪರ್ ಡಿವಿಷನ್: ಎಚ್‌ಎಎಸ್‌ಸಿ-ಎಡಿಇ (ಮ. 3ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry