ಫುಟ್‌ಬಾಲ್: ಡ್ರಾ ಸಾಧಿಸಿದ ಯಂಗ್ ಚಾಲೆಂಜರ್ಸ್

ಸೋಮವಾರ, ಜೂಲೈ 22, 2019
27 °C

ಫುಟ್‌ಬಾಲ್: ಡ್ರಾ ಸಾಧಿಸಿದ ಯಂಗ್ ಚಾಲೆಂಜರ್ಸ್

Published:
Updated:

ಬೆಂಗಳೂರು: ಸಮಬಲ ಪ್ರದರ್ಶನ ತೋರಿದ ಯಂಗ್ ಚಾಲೆಂಜರ್ಸ್ ಹಾಗೂ ಮುಸ್ಲಿಂ ಹೀರೋಸ್ ತಂಡಗಳು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ 1-1ರಲ್ಲಿ ಡ್ರಾ ಸಾಧಿಸಿದವು.ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ಪರ ಮ್ಯಾಥ್ಯೂ 5ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿದರು. ಬಳಿಕ ಅಜಾನ್ (22ನೇ ನಿ.) ತಂದಿತ್ತ ಗೋಲಿನ ಮೂಲಕ ಮುಸ್ಲಿಂ ಹೀರೋಸ್ ತಂಡ ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.ಮತ್ತೊಂದು ಪಂದ್ಯದಲ್ಲಿ ಅಜಯ್ (39ನೇ ನಿ.) ತಂದಿತ್ತ ಗೋಲಿನ ನೆರವಿನಿಂದ ಲಾ ಮಸಿಯಾ ತಂಡ 1-0 ರಲ್ಲಿ ಸೌತ್ ಇಂಡಿಯಾ ವಿರುದ್ಧ ಜಯಿಸಿತು. ಬುಧವಾರದ ಪಂದ್ಯಗಳಲ್ಲಿ ಶೈನಿಂಗ್ ಸ್ಟಾರ್-ಮಿಸಾಕಾ, ಕೊಂಕಣ್- ವೆಟೆರನ್ಸ್ ಹಾಗೂ ಹಿಂದು ಸೋಷಿಯಲ್ಸ್- ಸ್ಪೋರ್ಟಿಂಗ್ ಯೂತ್ಸ್ ತಂಡಗಳು ಸೆಣಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry