ಸೋಮವಾರ, ನವೆಂಬರ್ 18, 2019
23 °C

ಫುಟ್‌ಬಾಲ್ ತರಬೇತಿ ಶಿಬಿರ ಆರಂಭ

Published:
Updated:

ಮೈಸೂರು: ವಿಜಯನಗರ ಫುಟ್‌ಬಾಲ್ ಕ್ಲಬ್ ಆಶ್ರಯದಲ್ಲಿ ಬೇಸಿಗೆ ರಜೆಯ ಅಂಗವಾಗಿ 10ರಿಂದ 18 ವರ್ಷದೊಳಗಿನ ಬಾಲಕರಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಈಚೆಗೆ ಆರಂಭಿಸಲಾಯಿತು.ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಮಹೇಶಚಂದ್ರ ಗುರು ಅವರು ಶಿಬಿರ ಉದ್ಘಾಟಿಸಿದರು.ರಾಷ್ಟ್ರೀಯ ಹ್ಯಾಂಡ್‌ಬಾಲ್ ತಂಡದ ಮಾಜಿ ನಾಯಕ ಸುರೇಶ್, ಕ್ಲಬ್ ಅಧ್ಯಕ್ಷ ಎಂ. ಸುಕುಮಾರ್, ಸಂಯೋಜಕರಾದ ಅವಿನಾಶ್, ಸಿ. ಶ್ರೇಯಸ್ ಹಾಜರಿದ್ದರು. ಏಪ್ರಿಲ್ 7ರವರೆಗೆ ನಡೆಯಲಿರುವ ಶಿಬಿರದಲ್ಲಿ 20 ಆಟಗಾರರು ಭಾಗವಹಿಸುವರು.ಸಿದ್ಧಾರ್ಥ ತಂಡಕ್ಕೆ ಪ್ರಶಸ್ತಿ

ಮೈಸೂರು: ಸಿದ್ಧಲಿಂಗಪುರದ ಸಿದ್ಧಾರ್ಥ  ಪುರುಷರ ಕಬಡ್ಡಿ ತಂಡವು ಸೋಮವಾರ ತಡರಾತ್ರಿ ಮುಕ್ತಾಯ ವಾದ ಮೈಸೂರು ವಿಭಾಗಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.ಗ್ರಾಮದೇವತೆ ಉತ್ಸವದ ಅಂಗ ವಾಗಿ ಒಂಟಿಕೊಪ್ಪಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ  ಸಿದ್ಧಾರ್ಥ ತಂಡವು 13-3ರಿಂದ ಅಶೋಕಪುರಂ ಕಬಡ್ಡಿ ತಂಡವನ್ನು ಸೋಲಿಸಿತು. ಸಿದ್ಧಾರ್ಥ ಪರವಾಗಿ ರಮೇಶ್ ಉತ್ತಮ ಆಟ ಪ್ರದರ್ಶಿಸಿದರು.ಸೆಮಿಫೈನಲ್ ಸುತ್ತಿನಲ್ಲಿ ಸಿದ್ಧಾರ್ಥ ತಂಡವು 16-13ರಿಂದ ಕುಂಬಾರ ಕೊಪ್ಪಲಿನ ಹೊಯ್ಸಳ ತಂಡವನ್ನು ಪರಾಭವಗೊಳಿಸಿತ್ತು.  ಅಶೋಕಪುರಂ ತಂಡವು 14-12ರಿಂದ ನಾಗನಹಳ್ಳಿ ತಂಡದ ವಿರುದ್ಧ ಗೆದ್ದಿತು. ಶಂಕರ್ ಉತ್ತಮ ಪ್ರದರ್ಶನ ತೋರಿದರು.

ಪ್ರತಿಕ್ರಿಯಿಸಿ (+)