ಫುಟ್‌ಬಾಲ್: ದಯಾನಂದ್ ಹ್ಯಾಟ್ರಿಕ್ ಸಾಧನೆ

7

ಫುಟ್‌ಬಾಲ್: ದಯಾನಂದ್ ಹ್ಯಾಟ್ರಿಕ್ ಸಾಧನೆ

Published:
Updated:

ಬೆಂಗಳೂರು: ದಯಾನಂದ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರು ಕಿಕ್ಕರ್ಸ್‌ ತಂಡ ಮಂಡ್ಯದಲ್ಲಿ ನಡೆಯುತ್ತಿರುವ ನಾಗೇಗೌಡ ಹಾಗೂ ಮೀರ್ ಅಬ್ದುಲ್ ಕರೀಮ್ ಸ್ಮಾರಕ ರಾಜ್ಯ ಫುಟ್‌ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು.ಮಂಡ್ಯ ಜಿಲ್ಲೆ ಫುಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಗುರುವಾರ ಕಿಕ್ಕರ್ಸ್‌ 3-1ಗೋಲುಗಳಿಂದ ಎಬಿಡಬ್ಲ್ಯುಎಸ್ ಬೆಂಗಳೂರು ತಂಡವನ್ನು ಮಣಿಸಿತು. ದಯಾನಂದ್ 5, 12 ಹಾಗೂ 25ನೇ ನಿಮಿಷದಲ್ಲಿ ಗೋಲು ಗಳಿಸಿ ಕಿಕ್ಕರ್ಸ್‌ ತಂಡದ ಗೆಲುವಿನ ರೂವಾರಿಯೆನಿಸಿದರು. ಎಬಿಡಬ್ಲ್ಯುಎಸ್ ತಂಡದ ಏಕೈಕ ಗೋಲನ್ನು ಮಹೇಂದ್ರನ್ 10ನೇ ನಿಮಿಷದಲ್ಲಿ ಗಳಿಸಿದರು.ಯುಎಫ್‌ಸಿ ತಂಡಕ್ಕೆ ನಿರಾಸೆ: ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಯುನೈಟೆಡ್ ಫುಟ್‌ಬಾಲ್ ಅಸೋಸಿಯೇಷನ್ (ಯುಎಫ್‌ಸಿ) ತಂಡ 0-2ಗೋಲುಗಳಿಂದ ಎಡಿಇ ಬೆಂಗಳೂರು ತಂಡದ ಎದುರು ನಿರಾಸೆ ಅನುಭವಿಸಿತು.ವಿಜಯಿ ತಂಡದ ಶ್ರೀಧರ್ 25ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ರಾಜ್‌ಕಿರಣ್ 57ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.ಶುಕ್ರವಾರ ವಿಶ್ರಾಂತಿ ದಿನವಾಗಿದೆ. ಶನಿವಾರ ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಪೋಸ್ಟಲ್-ಎಜಿಒಆರ್‌ಸಿ ಹಾಗೂ ಎಡಿಇ-ಬೆಂಗಳೂರು ಕಿಕ್ಕರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry