ಫುಟ್‌ಬಾಲ್ ಪಂದ್ಯಗಳಿಗೆ ತಾತ್ಕಾಲಿಕ ತಡೆ

7

ಫುಟ್‌ಬಾಲ್ ಪಂದ್ಯಗಳಿಗೆ ತಾತ್ಕಾಲಿಕ ತಡೆ

Published:
Updated:

ಜಮ್‌ಶೆಡ್‌ಪುರ (ಪಿಟಿಐ): ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟ (ಎಐಎಫ್‌ಎಫ್)ದ ಮಾನ್ಯತೆಯನ್ನು ಪಡೆಯದಿರುವ ತ್ರಿಪುರಾ ತಂಡಕ್ಕೆ ಪ್ರವೇಶ ನೀಡಿದ ಕಾರಣ 34ನೇ ರಾಷ್ಟ್ರೀಯ ಕ್ರೀಡಾಕೂಟದ ಎಲ್ಲ ಮಹಿಳಾ ಫುಟ್‌ಬಾಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕ್ರೀಡಾಕೂಟದಲ್ಲಿ ಇದರಿಂದ ಮತ್ತೊಂದು ವಿವಾದದ ಕಿಡಿ ಹೊತ್ತಿಕೊಂಡಿದೆ.‘ಸೋಮವಾರ ನಡೆಯಬೇಕಿದ್ದ ಜಾರ್ಖಂಡ್-ತಮಿಳುನಾಡು ಮತ್ತು ಹರಿಯಾಣ-ಓಡಿಶಾ ನಡುವಿನ ಮಹಿಳಾ ಫುಟ್‌ಬಾಲ್ ಪಂದ್ಯಗಳನ್ನು ತಡೆ ಹಿಡಿಯಲಾಗಿದೆ’ ಎಂದು ಟೂರ್ನಿ ಯ ಸಂಘಟನಾ ಸಮಿತಿ ಮುಖ್ಯಸ್ಥ ಕ್ಯಾ.ಅಮಿತಾಬ್ ಪ್ರಕಟಿಸಿದ್ದಾ, ‘ವಿವಾ ದದ ಕುರಿತಂತೆ ಎಐಎಫ್‌ಎಫ್ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವರೆಗೆ ಪಂದ್ಯಗಳನ್ನು ನಡೆಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.ತ್ರಿಪುರಾ ತಂಡಕ್ಕೆ ಅವಕಾಶ ನೀಡುವ ಸಂಬಂಧ ಎಐಎಫ್‌ಎಫ್ ಅಧ್ಯಕ್ಷರು ಹಾಗೂ ಕ್ರೀಡಾಕೂಟದ ತಾಂತ್ರಿಕ ಸಮಿತಿ (ಜಿಟಿಸಿಸಿ) ಅಧ್ಯಕ್ಷರ ಮಧ್ಯೆ ಸಹಮತ ಇಲ್ಲದಿರುವುದೇ ವಿವಾದಕ್ಕೆ ಕಾರಣವಾಗಿದೆ. ಜಿಟಿಸಿಸಿ ಅಧ್ಯಕ್ಷರು, ಫುಟ್‌ಬಾಲ್ ಸಂಘಟನಾ ಸಮಿತಿಗೆ ಪತ್ರ ಬರೆದು ತ್ರಿಪುರಾ ತಂಡಕ್ಕೆ ಆಡಲು ಅವಕಾಶ ನೀಡುವಂತೆ ಸೂಚನೆ ನೀಡಿ ದರೆ, ಈ ನಡೆಗೆ ಎಐಎಫ್‌ಎಫ್ ವಿರೋ ಧ ವ್ಯಕ್ತಪಡಿಸಿದೆ. ಎಐಎಫ್ ಎಫ್ ನಿಂದ ಅಂತಿಮ ತೀರ್ಪು ಹೊರಬಿದ್ದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳ ಲಾಗುವುದು ಎಂದು ಕ್ಯಾ. ಅಮಿತಾಬ್  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry