ಫುಟ್‌ಬಾಲ್: ಬಂಗಾಳಕ್ಕೆ ಪ್ರಶಸ್ತಿ

7

ಫುಟ್‌ಬಾಲ್: ಬಂಗಾಳಕ್ಕೆ ಪ್ರಶಸ್ತಿ

Published:
Updated:

ಬೆಂಗಳೂರು: ಭರ್ಜರಿ ಪ್ರದರ್ಶನ ನೀಡಿದ ಬಂಗಾಳ ತಂಡದವರು ಉದ್ಯಾನನಗರಿಯಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಸ್ಲಮ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಸೇಂಟ್ ಜಾನ್ಸ್ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಬಂಗಾಳ 4-1ಗೋಲುಗಳಿಂದ ಗುಜರಾತ್ ತಂಡವನ್ನು ಮಣಿಸಿತು.ಮೆಕ್ಸಿಕೋದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನು ಪರಿಗಣನೆಗೆ ತಗೆದುಕೊಳ್ಳಲಾಗುತ್ತದೆ. ಆದ್ದರಿಂದ ಈ ಟೂರ್ನಿ ಮಹತ್ವ ಪಡೆದಿತ್ತು.ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ವಿದರ್ಭ, ತಮಿಳುನಾಡು ಸೇರಿದಂತೆ ಒಟ್ಟು 14 ರಾಜ್ಯಗಳ 128 ಸ್ಪರ್ಧಿಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಮೊದಲು 30 ಆಟಗಾರರ ಸಂಭವನೀಯರ ಪಟ್ಟಿ ಮಾಡಲಾಗುತ್ತದೆ. ಅದರಲ್ಲಿ ಎಂಟು ಆಟಗಾರರು ದೇಶವನ್ನು ಪ್ರತಿನಿಧಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry