ಶನಿವಾರ, ಮಾರ್ಚ್ 6, 2021
20 °C

ಫುಟ್‌ಬಾಲ್: ಬಿಎಫ್‌ಸಿ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್: ಬಿಎಫ್‌ಸಿ ತಂಡಕ್ಕೆ ಗೆಲುವು

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ 2–1 ಗೋಲುಗಳಿಂದ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಎದುರು ಗೆಲುವು ಸಾಧಿಸಿತು.ರಾಜ್ಯ ಫುಟ್‌ಬಾಲ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯೀ ತಂಡದ ಕರಣ್‌ 4 ಮತ್ತು 23ನೇ ನಿಮಿಷದಲ್ಲಿ ಗೋಲು ಗಳಿಸಿದರು. ‘ಎ’ ಡಿವಿಷನ್‌ ವಿಭಾಗದ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌್ 4–1 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್‌್ ವಿರುದ್ಧ ಗೆಲುವು ಪಡೆಯಿತು.ಕಾರ್ತಿಕ್‌ 42ನೇ ನಿಮಿಷದಲ್ಲಿ ಮೊದಲು ಗೋಲು ತಂದಿತ್ತರೆ, ಆದಿತ್ಯ ಹ್ಯಾಟ್ರಿಕ್‌ ಗೋಲು ಗಳಿಸಿದರು. ಆ ಗೋಲುಗಳು 52, 70 ಮತ್ತು 80ನೇ ನಿಮಿಷದಲ್ಲಿ ಬಂದವು.‘ಬಿ’ ಡಿವಿಷನ್‌ ವಿಭಾಗದ ಪಂದ್ಯದಲ್ಲಿ ಜುಪಿಟರ್‌ 3–1 ಗೋಲುಗಳಿಂದ ಓರಿಯಂಟಲ್‌ ವಿರುದ್ಧ ಜಯದ ನಗೆ ಬೀರಿತು. ಧರ್ಮರಾಜ ಯೂನಿಯನ್‌ ಮತ್ತು ಮಿನರ್ವ ನಡುವಿನ ಇನ್ನೊಂದು ಪಂದ್ಯವು 1–1 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.