ಫುಟ್‌ಬಾಲ್: ಬೆಂಗಳೂರು ಕಿಕ್ಕರ್ಸ್‌ಗೆ ಜಯ

7

ಫುಟ್‌ಬಾಲ್: ಬೆಂಗಳೂರು ಕಿಕ್ಕರ್ಸ್‌ಗೆ ಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಬೆಂಗಳೂರು ಕಿಕ್ಕರ್ಸ್‌ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಅಶೋಕನಗರದಲ್ಲಿರುವ ಪುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 3-1ಗೋಲುಗಳಿಂದ ಗೋವನ್ಸ್ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ಅರುಣ್ 17ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ತಕ್ಕ ಸಾಥ್ ನೀಡಿದ ಸಮರ್ಥ ಹಾಗೂ ಸಂದೀಪ್ ಕ್ರಮವಾಗಿ 48 ಮತ್ತು 55ನೇ ನಿಮಿಷದಲ್ಲಿ ಗೋಲು ಗಳಿಸಿದರು. ಗೋವನ್ಸ್ ಪರ ಏಕೈಕ ಗೋಲನ್ನು ಕಿಶೋರ್ 38ನೇ ನಿಮಿಷದಲ್ಲಿ ತಂದಿಟ್ಟರು.ಜವಾಹರ ಯೂನಿಯನ್ ಹಾಗೂ ಜುಪಿಟರ್ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.ಜವಾಹರ್‌ನ ದೇಸಾಯಿ 35 ಹಾಗೂ ಚಿಂತನ್ 60ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಕ್ಕು ಮುನ್ನ ಜುಪಿಟರ್ ತಂಡದ ಎಂ. ವಿನೋದ್ 12 ಹಾಗೂ ಚಿನ್ನಪ್ಪನ್ 40ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದು ಕೊಟ್ಟಿದ್ದರು. ಕೊನೆಯಲ್ಲಿ ಚುರುಕಿನ ಆಟವಾಡಿ ಜವಾಹರ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡಿತು.ಒರಿಯಂಟಲ್ ತಂಡ 1-0ರಲ್ಲಿ ರಾಯಲ್ಸ್ ತಂಡವನ್ನು ಸೋಲಿಸಿತು. ಭರತ್ 59ನೇ ನಿಮಿಷದಲ್ಲಿ ಗೋಲು ಗಳಿಸಿ ಒರಿಯಂಟಲ್ ಗೆಲುವಿನ ರೂವಾರಿ ಎನಿಸಿದರು.ಶ್ರೀ ಗಜಾನನ 4-2ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಮೇಲೂ, ನ್ಯಾಷನಲ್ಸ್4-0ರಲ್ಲಿ ಯಂಗ್ ಮುಸ್ಲಿಂ ವಿರುದ್ಧವೂ ಗೆಲುವು ಸಾಧಿಸಿತು. ಸನ್‌ರೈಸಿಂಗ್ ಹಾಗೂ ಮಿನರ್ವ ತಂಡಗಳ ನಡುವಿನ ಪಂದ್ಯವೂ ಗೋಲು ರಹಿತವಾಗಿ ಡ್ರಾದಲ್ಲಿ ಅಂತ್ಯ ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry