ಫುಟ್‌ಬಾಲ್: ಬೆಂಗಳೂರು ಕ್ರೀಡಾಶಾಲೆಗೆ ಪ್ರಶಸ್ತಿ

ಸೋಮವಾರ, ಮೇ 27, 2019
23 °C

ಫುಟ್‌ಬಾಲ್: ಬೆಂಗಳೂರು ಕ್ರೀಡಾಶಾಲೆಗೆ ಪ್ರಶಸ್ತಿ

Published:
Updated:

ತುಮಕೂರು: ರಾಜ್ಯಮಟ್ಟದ ಶಾಲಾ ಫುಟ್‌ಬಾಲ್ 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಬೆಂಗಳೂರು (ವಿದ್ಯಾನಗರ) ಸರ್ಕಾರಿ ಕ್ರೀಡಾ ಪ್ರೌಢಶಾಲೆ ತಂಡವು ಲೀಗ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ ಜಯಗಳಿಸಿ, ಒಟ್ಟು 12 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ದ್ವಿತೀಯ ಸ್ಥಾನವನ್ನು ಮೈಸೂರು ವಿಭಾಗ ಪಡೆಯಿತು.ಬೆಂಗಳೂರು ಕ್ರೀಡಾ ಶಾಲೆ ಬಾಲಕರ ತಂಡ ಉತ್ತಮ ಪ್ರದರ್ಶನ ನೀಡಿ, ಎಲ್ಲ ಪಂದ್ಯಗಳಲ್ಲೂ ಗಮನ ಸೆಳೆಯಿತು.

17 ವರ್ಷ ವಯೋಮಿತಿ ಬಾಲಕಿಯರ ವಿಭಾಗದಲ್ಲಿ 3 ಪಂದ್ಯಗಳಿಂದ 9 ಅಂಕ ಶೇಖರಿಸಿದ ಮೈಸೂರು ವಿಭಾಗ ಪ್ರಥಮ ಸ್ಥಾನ ಪಡೆಯಿತು. ಅತಿಥೇಯ ಬೆಂಗಳೂರು ವಿಭಾಗ ತಂಡ ದ್ವಿತೀಯ ಸ್ಥಾನ ಪಡೆಯಿತು.  14 ವಯೋಮಿತಿಯ ಬೆಳಗಾವಿ ವಿಭಾಗ ಪ್ರಥಮ ಮತ್ತು ಮೈಸೂರು ವಿಭಾಗ ದ್ವಿತೀಯ ಸ್ಥಾನ ಪಡೆದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry