ಫುಟ್‌ಬಾಲ್: ಬೆಂಗಳೂರು ದಕ್ಷಿಣ, ಮಂಗಳೂರು ತಂಡಗಳಿಗೆ ಪ್ರಶಸ್ತಿ

7

ಫುಟ್‌ಬಾಲ್: ಬೆಂಗಳೂರು ದಕ್ಷಿಣ, ಮಂಗಳೂರು ತಂಡಗಳಿಗೆ ಪ್ರಶಸ್ತಿ

Published:
Updated:

ಬೆಳಗಾವಿ: ಬೆಂಗಳೂರು ದಕ್ಷಿಣ ಹಾಗೂ ಮಂಗಳೂರು ತಂಡದವರು ಇಲ್ಲಿನ ಅಂಜುಮನ್ ಪದವಿಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಆಶ್ರಯದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಫುಟ್‌ಬಾಲ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್ ಆದರು.

ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ತಂಡಗಳ ನಡುವೆ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದ ನಿಗದಿತ ಅವಧಿಯಲ್ಲಿ ಯಾವುದೇ ತಂಡ ಗೋಲು ಗಳಿಸಲಿಲ್ಲ. ಟೈಬ್ರೇಕರ್‌ನಲ್ಲಿ ಬೆಂಗಳೂರು ದಕ್ಷಿಣ ತಂಡ 3-2ರ ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಸೆಮಿಫೈನಲ್‌ನಲ್ಲಿ ಬೆಂಗಳೂರು ಉತ್ತರ ತಂಡ ಮಂಗಳೂರು ತಂಡವನ್ನು 1-0 ಯಿಂದ ಹಾಗೂ ಬೆಂಗಳೂರು ದಕ್ಷಿಣ ತಂಡ, ಉತ್ತರ ಕನ್ನಡ ಜಿಲ್ಲಾ ತಂಡವನ್ನು 2-0ಯಿಂದ ಸೋಲಿಸಿತು.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲೂ ನಿಗದಿತ ಅವಧಿಯಲ್ಲಿ ಮಂಗಳೂರು ಹಾಗೂ ತುಮಕೂರು ತಂಡಗಳು ಗೋಲು ಗಳಿಸಲಿಲ್ಲ. ಟೈಬ್ರೇಕರ್‌ನಲ್ಲಿ 4-1 ಗೋಲುಗಳಿಂದ ಮಂಗಳೂರು ತಂಡ ಪ್ರಶಸ್ತಿ ಗೆದ್ದುಕೊಂಡಿತು. ಸೆಮಿಫೈನಲ್‌ನಲ್ಲಿ ಮಂಗಳೂರು ತಂಡ ಬೆಂಗಳೂರು ದಕ್ಷಿಣ ತಂಡವನ್ನು 2-0ರಲ್ಲಿ ಮಣಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry