ಫುಟ್‌ಬಾಲ್: ಭಾರತಕ್ಕೆ ಎರಡನೇ ಸ್ಥಾನ

7

ಫುಟ್‌ಬಾಲ್: ಭಾರತಕ್ಕೆ ಎರಡನೇ ಸ್ಥಾನ

Published:
Updated:

ಶಿಜುಕಾ, ಜಪಾನ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 14 ವರ್ಷ ವಯಸ್ಸಿನೊಳಗಿನವರ ಸಾರ್ಕ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೋಲು ರಹಿತ ಡ್ರಾ ಮಾಡಿಕೊಂಡಿದ್ದಾರೆ.ಟೊಕಿನೊಸುಮಿಕಾ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗೋಲು ಗಳಿಸಲು ನಡೆಸಿದ ಪ್ರಯತ್ನದಲ್ಲಿ ಉಭಯ ತಂಡಗಳು ಯಶ ಕಾಣಲಿಲ್ಲ. ಭಾರತ ಈ ಟೂರ್ನಿಯಲ್ಲಿ ಒಟ್ಟು ಎಂಟು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿತು. ಆತಿಥೇಯ ಜಪಾನ್ 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry