ಫುಟ್‌ಬಾಲ್: ಭಾರತಕ್ಕೆ ವಿಜಯ

7

ಫುಟ್‌ಬಾಲ್: ಭಾರತಕ್ಕೆ ವಿಜಯ

Published:
Updated:

ನವದೆಹಲಿ (ಪಿಟಿಐ): ಭಾರತ ಮಹಿಳಾ ತಂಡದವರು ಮಲೇಷ್ಯಾದಲ್ಲಿ ಭಾನುವಾರ ಆರಂಭವಾದ ಎಎಫ್‌ಸಿ (19 ವರ್ಷದೊಳಗಿನವರು) ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಭಾನುವಾರ ನಡೆದ `ಎ~ ಗುಂಪಿನ ಪಂದ್ಯದಲ್ಲಿ ಭಾರತ 1-0ಗೋಲಿನಿಂದ ಬಾಂಗ್ಲಾದೇಶವನ್ನು ಮಣಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳಿಂದಲೂ ಗೋಲುಗಳು ಬಂದಿರಲಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ ಭಾರತದ ನಿಖಿಲಾ ತುಂಬೊಯಿಲ್ 76ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರುವಾರಿ ಎನಿಸಿದರು.ಅಕ್ಟೋಬರ್ 24ರಂದು ನಡೆಯುವ ಎರಡನೇ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನದ ಎದುರು ಸೆಣಸಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ. ಇಲ್ಲಿ ಗೆಲುವು ಸಾಧಿಸುವ ತಂಡ ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಆರ್ಹತೆ ಪಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಈ ಚಾಂಪಿಯನ್‌ಷಿಪ್ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry