ಫುಟ್‌ಬಾಲ್: ಭಾರತ ತಂಡದ ಶುಭಾರಂಭ

ಶುಕ್ರವಾರ, ಜೂಲೈ 19, 2019
23 °C

ಫುಟ್‌ಬಾಲ್: ಭಾರತ ತಂಡದ ಶುಭಾರಂಭ

Published:
Updated:

ಕಠ್ಮಂಡು (ಪಿಟಿಐ): ಭಾರತ ತಂಡದವರು ಭಾನುವಾರ ಇಲ್ಲಿ ಆರಂಭವಾದ ಎಸ್‌ಎಎಫ್‌ಎಫ್ 16 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಆರ್ಮಿ ಕ್ರೀಡಾಂಗಣದಲ್ಲಿ ನಡೆದ `ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ 4-1 ಗೋಲುಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ವಿಜಯಿ ತಂಡ ವಿರಾಮದ ವೇಳೆಗೆ 2-1 ಗೋಲುಗಳಿಂದ ಮುಂದಿತ್ತು. ಸ್ಟ್ರೈಕರ್ ಬೆದಾಶ್ವೋರ್ ಸಿಂಗ್ 23ನೇ ಹಾಗೂ 88ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ  ಮಹತ್ವದ ಪಾತ್ರ ವಹಿಸಿದರು. ಕೃಷ್ಣ ಪಂಡಿತ್ (21ನೇ ನಿಮಿಷ) ಹಾಗೂ ಪ್ರೊಸೆನ್‌ಜಿತ್ (66ನೇ ನಿ.) ಗೋಲು ಗಳಿಸಿದರು. ಈ ಗೆಲುವಿನ ಮೂಲಕ ಭಾರತಕ್ಕೆ ಮೂರು ಪಾಯಿಂಟ್ ಲಭಿಸಿತು.`ಮೂಲತತ್ವಕ್ಕೆ ಬದ್ಧರಾಗಿ ನಾವು ಆಡಿದೆವು. ಚಾಂಪಿಯನ್‌ಷಿಪ್‌ಗೆ ಮುನ್ನ ನಡೆಸಿದ ಕಠಿಣ ಪ್ರಯತ್ನಕ್ಕೆ ಫಲ ಲಭಿಸಿದೆ. ಉತ್ತಮ ಆರಂಭ ಪಡೆದಿರುವುದು ಖುಷಿ ತಂದಿದೆ' ಎಂದು ಭಾರತ ತಂಡದ ಕೋಚ್ ಗೌತಮ್ ಘೋಷ್ ನುಡಿದಿದ್ದಾರೆ.ಭಾರತ, ಶ್ರೀಲಂಕಾ ಮಾತ್ರವಲ್ಲದೇ ಬಾಂಗ್ಲಾದೇಶ ಕೂಡ `ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. `ಎ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ, ಆತಿಥೇಯ ನೇಪಾಳ, ಭೂತಾನ್ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ.ಜುಲೈ 25 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಎರಡನೇ ಪಂದ್ಯವನ್ನಾಡಲಿದೆ. ಜುಲೈ 27 ಹಾಗೂ 28ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಜುಲೈ 30ರಂದು ಫೈನಲ್ ಹಣಾಹಣಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry