ಫುಟ್‌ಬಾಲ್ ಮಾಜಿ ಆಡಳಿತಗಾರ ವಿಜಯರಂಗಮ್ ನಿಧನ

7

ಫುಟ್‌ಬಾಲ್ ಮಾಜಿ ಆಡಳಿತಗಾರ ವಿಜಯರಂಗಮ್ ನಿಧನ

Published:
Updated:ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಗಾಗಿ (ಕೆಎಸ್‌ಎಫ್‌ಎ) ಐದು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ ಡಿ. ವಿಜಯರಂಗಮ್ (82) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.ಅಂತ್ಯಕ್ರಿಯೆ ಕಲ್ಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮಂಗಳವಾರ ನಡೆಯಿತು.ವಿಜಯರಂಗಮ್ 10 ವರ್ಷಗಳ ಕಾಲ ಕೆಎಸ್‌ಎಫ್‌ಎ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಸಾಕರ್ ವೆಲ್‌ಫೇರ್ ಟ್ರಸ್ಟ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಫುಟ್‌ಬಾಲ್ ಆಟಗಾರರೂ ಆಗಿದ್ದ ಅವರು 1950ರ ದಶಕದಲ್ಲಿ ಡ್ರ್ಯಾಗನ್ ಫುಟ್‌ಬಾಲ್ ಕ್ಲಬ್‌ನ್ನು ಪ್ರತಿನಿಧಿಸಿದ್ದರು.ವಿಜಯರಂಗಮ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಶೋಕ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry