ಫುಟ್‌ಬಾಲ್: ಯುನೈಟೆಡ್ ಕ್ಲಬ್‌ಗೆ ಗೆಲುವು

7

ಫುಟ್‌ಬಾಲ್: ಯುನೈಟೆಡ್ ಕ್ಲಬ್‌ಗೆ ಗೆಲುವು

Published:
Updated:

ಕೋಲ್ಕತ್ತ (ಪಿಟಿಐ): ರಾಂತಿ ಮಾರ್ಟಿನ್ಸ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ತಂಡ ಇಲ್ಲಿ ಭಾನುವಾರ ನಡೆದ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತು.ಇಲ್ಲಿನ ಯುಬಾ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುನೈಟೆಡ್ ಕ್ಲಬ್ 5-1ಗೋಲುಗಳಿಂದ ಏರ್ ಇಂಡಿಯಾ ತಂಡವನ್ನು ಮಣಿಸಿತು.  ಮಾರ್ಟಿನ್ 13ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಇನ್ನುಳಿದ ಗೋಲುಗಳನ್ನು 32 ಮತ್ತು 57ನೇ ನಿಮಿಷದಲ್ಲಿ ಮತ್ತೆರೆಡು ಗೋಲುಗಳನ್ನು ತಂದಿತ್ತರು.

 

ಇದೇ ತಂಡದ ಕೆ. ಆಸಿಫ್ (65ನೇ ನಿ.) ಹಾಗೂ ಸಿ.ಕೆ. ವಿನೀತ್ (80ನೇ ನಿ.) ಗೋಲು ಕಲೆ ಹಾಕಿದರು.

ಏರ್ ಇಂಡಿಯಾ ತಂಡದ ಏಕೈಕ ಗೋಲನ್ನು ಮೈಕಿ ಫೆರ್ನಾಂಡಿಸ್ 80ನೇ ನಿಮಿಷದಲ್ಲಿ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry