ಬುಧವಾರ, ನವೆಂಬರ್ 20, 2019
27 °C

ಫುಟ್‌ಬಾಲ್: ರಂಗ್‌ದಜೀದ್ ಯುನೈಟೆಡ್‌ಗೆ ಗೆಲುವು

Published:
Updated:

ಬೆಂಗಳೂರು: ಬಾಬಾತುಂದೆ ಅಯೊಮಿಡೆ ತಂದಿತ್ತ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ರಂಗ್‌ದಜೀದ್ ಯುನೈಟೆಡ್ ತಂಡ ಐ-ಲೀಗ್ ಎರಡನೇ ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಂಗ್‌ದಜೀದ್ ತಂಡ 3-1 ಗೋಲುಗಳಿಂದ ಸದರ್ನ್ ಸಮಿತಿ ತಂಡವನ್ನು ಮಣಿಸಿತು.ಬಾಬಾತುಂದೆ ಪಂದ್ಯದ 17, 41 ಹಾಗೂ 86ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಸದರ್ನ್ ಸಮಿತಿ ತಂಡದ ಏಕೈಕ ಗೋಲನ್ನು ಕೌಶಿಕ್ ಬಿಶ್ವಾಸ್ 26ನೇ ನಿಮಿಷದಲ್ಲಿ ಗಳಿಸಿದರು.

ಪ್ರತಿಕ್ರಿಯಿಸಿ (+)