ಫುಟ್‌ಬಾಲ್: ರಾಯಲ್ಸ್‌ಗೆ ಜಯ

7

ಫುಟ್‌ಬಾಲ್: ರಾಯಲ್ಸ್‌ಗೆ ಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ರಾಯಲ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ಸ್ 4-0 ಗೋಲುಗಳಿಂದ ಮಿನರ್ವ ತಂಡವನ್ನು ಮಣಿಸಿತು.  ಸರವಣ (7ನೇ ನಿಮಿಷ), ಮೂರ್ತಿ (13), ವೇಣು (42) ಮತ್ತು ರೇಮಂಡ್ (44) ಅವರು ರಾಯಲ್ಸ್ ಪರ ಗೋಲು ಗಳಿಸಿದರು.ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಕಿಕ್ಕರ್ಸ್ ತಂಡ 3-2 ಗೋಲುಗಳಿಂದ ಬಿಡಬ್ಲ್ಯುಎಸ್‌ಎಸ್‌ಬಿ ವಿರುದ್ಧ ಗೆಲುವು ಸಾಧಿಸಿತು. ದಯಾನಂದ (46 ಮತ್ತು 59 ನೇ ನಿ.), ಹಾಗೂ ಸೂರಿ (15) ವಿಜೇತ ತಂಡದ ಪರ ಚೆಂಡನ್ನು ಗುರಿ ಸೇರಿಸಿದರೆ, ಬಿಡಬ್ಲ್ಯುಎಸ್‌ಎಸ್‌ಬಿ ತಂಡದ ಎರಡೂ ಗೋಲುಗಳನ್ನು ಜೋಸೆಫ್ (31 ಮತ್ತು 33) ತಂದಿತ್ತರು. ಗುರುವಾರ ನಡೆಯುವ ಪಂದ್ಯಗಳಲ್ಲಿ ಜವಾಹರ್ ಯೂನಿಯನ್- ಯಂಗ್ ಮುಸ್ಲಿಮ್ಸ ಮತ್ತು ಶ್ರೀ ಗಜಾನನ- ಸನ್ ರೈಸಿಂಗ್ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry