ಫುಟ್‌ಬಾಲ್: ಸಿಐಎಲ್- ಬಿಇಎಂಎಲ್ ಪಂದ್ಯ ಡ್ರಾ

ಬುಧವಾರ, ಜೂಲೈ 24, 2019
24 °C

ಫುಟ್‌ಬಾಲ್: ಸಿಐಎಲ್- ಬಿಇಎಂಎಲ್ ಪಂದ್ಯ ಡ್ರಾ

Published:
Updated:

ಬೆಂಗಳೂರು: ಸಿಐಎಲ್ ಮತ್ತು ಬಿಇಎಂಎಲ್ ತಂಡಗಳ ನಡುವಿನ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಅಶೋಕನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಗೋಲು ಗಳಿಸಲು ನಡೆಸಿದ ಪ್ರಯತ್ನಕ್ಕೆ ತಕ್ಕ ಫಲ ಲಭಿಸಲಿಲ್ಲ. ಆಕ್ರಮಣಕಾರಿ ಆಟ ತೋರಿದರೂ `ಫಿನಿಶಿಂಗ್~ನಲ್ಲಿ ಲೋಪಗಳು ಸಂಭವಿಸಿದವು.

ಬಿಇಎಂಎಲ್ ತಂಡಕ್ಕೆ 25ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ಲಭಿಸಿತ್ತು. ಆದರೆ ಖಲಂದರ್ ಅವರು ಈ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಲು ವಿಫಲರಾದರು. ಇದರಿಂದ ಪೂರ್ಣ ಪಾಯಿಂಟ್ ಗಳಿಸುವ ಅವಕಾಶವನ್ನು ತಂಡ ಕಳೆದುಕೊಂಡಿತು.

ಡಿವೈಎಸ್‌ಎಚ್‌ಗೆ ಭರ್ಜರಿ ಜಯ: ಡಿವೈಎಸ್‌ಎಚ್ ತಂಡದವರು `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ವಿರುದ್ಧ 7-0 ಗೋಲುಗಳ ಭರ್ಜರಿ ಗೆಲುವು ಪಡೆದರು.

ಸುನಿಲ್ ಕುಮಾರ್ (30 ಮತ್ತು 43ನೇ ನಿಮಿಷ) ಹಾಗೂ ರವಿಕಿರಣ್ (68 ಮತ್ತು 75) ಅವರು ತಲಾ ಎರಡು ಗೋಲುಗಳನ್ನು ಗಳಿಸಿ ಡಿವೈಎಸ್‌ಎಚ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಿಜೋಯ್ (48), ಹರ್ಷ್ (57) ಹಾಗೂ ಮಿತೇಶ್‌ಕುಮಾರ್ (66) ಅವರು ತಲಾ ಒಂದು ಗೋಲುಗಳನ್ನು ತಂದಿತ್ತರು.

ಸೋಮವಾರ ನಡೆಯುವ ಪಂದ್ಯಗಳಲ್ಲಿ ಎಜಿಒಆರ್‌ಸಿ- ಸ್ಟೂಡೆಂಟ್ಸ್ ಯೂನಿಯನ್ ಮತ್ತು ಎಚ್‌ಎಎಲ್- ಎಸ್‌ಎಐ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry