ಫುಟ್‌ಬಾಲ್: ಸ್ಟೀವನ್‌ಗೆ ಸ್ಥಾನವಿಲ್ಲ

7

ಫುಟ್‌ಬಾಲ್: ಸ್ಟೀವನ್‌ಗೆ ಸ್ಥಾನವಿಲ್ಲ

Published:
Updated:

ನವದೆಹಲಿ (ಪಿಟಿಐ): ಮುಂದಿನ ತಿಂಗಳು ಕಠ್ಮಂಡುವಿನಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್ ಫುಟ್‌ಬಾಲ್ ಟೂರ್ನಿಗೆ ಭಾರತದ 30 ಮಂದಿ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಸ್ಟೀವನ್ ಡಯಾಸ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.ಎಸ್‌ಎಎಫ್‌ಎಫ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದ ಡಯಾಸ್ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದರು. ಈ ಕಾರಣ ಕೋಚ್ ಸ್ಯಾವಿಯೊ ಮೆಡೀರಾ ಅವರು ಪ್ರಕಟಿಸಿದ ಪಟ್ಟಿಯಲ್ಲಿ ಡಯಾಸ್ ಅವಕಾಶ ಗಿಟ್ಟಿಸಿಲ್ಲ.ಗಾಯದಿಂದ ಚೇತರಿಸಿಕೊಂಡಿರುವ ಸ್ಟ್ರೈಕರ್ ಸುನಿಲ್ ಚೆಟ್ರಿ ತಂಡಕ್ಕೆ ಮರಳಿದ್ದಾರೆ. ಸಂಭಾವ್ಯ ಆಟಗಾರರ ತರಬೇತಿ ಶಿಬಿರ ಫೆಬ್ರುವರಿ 15 ರಿಂದ ದುಬೈನಲ್ಲಿ ನಡೆಯಲಿದೆ. ಆ ಬಳಿಕ 23 ಆಟಗಾರರ ಅಂತಿಮ ತಂಡದ ಆಯ್ಕೆ ನಡೆಯಲಿದೆ. ಎಎಫ್‌ಸಿ ಚಾಲೆಂಜ್ ಕಪ್ ಮಾರ್ಚ್ 8 ರಿಂದ 19ರ ವರೆಗೆ ನಡೆಯಲಿದೆ.ಸಂಭಾವ್ಯ ಆಟಗಾರರ ವಿವರ: ಗೋಲ್‌ಕೀಪರ್: ಕರಣ್‌ಜಿತ್ ಸಿಂಗ್, ಸುಭಾಶಿಶ್ ರಾಯ್ ಚೌಧರಿ, ಅರಿಂದಮ್ ಭಟ್ಟಾಚಾರ್ಯ, ಗುರ್‌ಪ್ರೀತ್ ಸಿಂಗ್ ಸಂಧುಡಿಫೆಂಡರ್ಸ್‌: ನಿರ್ಮಲ್ ಚೆಟ್ರಿ, ರಾಜು ಗಾಯಕ್ವಾಡ್, ಸಮೀರ್ ನಾಯ್ಕ, ಗೌರ್ಮಾಂಗಿ ಸಿಂಗ್, ಅನ್ವರ್ ಅಲಿ, ಕಿನ್ಸುಕ್ ದೇವನಾಥ್, ಸಯ್ಯದ್ ರಹೀಮ್ ನಬಿ, ಅರ್ನಬ್ ಮೊಂಡಲ್, ಗುರ್ಜಿಂದರ್ ಸಿಂಗ್. ಮಿಡ್‌ಫೀಲ್ಡರ್ಸ್‌: ಆದಿಲ್ ಖಾನ್, ಆಂಥೋಣಿ ಪೆರೇರಾ, ಕ್ಲೈಫಾರ್ಡ್ ಮಿರಾಂಡ, ರೀಸಗ್ಮಿ ವಾಶುಮ್, ಬಲ್‌ದೀಪ್ ಸಿಂಗ್, ಲಿಸ್ಟೆರ್ ಫೆರ್ನಾಂಡೆಸ್, ರೋಕಸ್ ಲಮಾರೆ, ಫ್ರಾನ್ಸಿಸ್ ಫೆರ್ನಾಂಡೆಸ್, ಜೆವೆಲ್ ರಾಜಾ, ಮನೀಷ್ ಮಥಾನಿ, ಲೆನ್ನಿ ರಾಡ್ರಿಗಸ್, ಲಾಲ್‌ರಿಂದಿಕಾ ರಾಲ್ಟೆ. ಫಾರ್ವರ್ಡ್ಸ್: ಸುನಿಲ್ ಚೆಟ್ರಿ, ಸುಶೀಲ್ ಸಿಂಗ್, ಸಿ.ಎಸ್. ಸಬೀತ್, ಮನನ್‌ದೀಪ್ ಸಿಂಗ್, ಜೋಕಿಮ್ ಅಬ್ರಾಂಚೆಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry