ಫುದದಿನ್ ಬಲ: ವಿಂಡೀಸ್ ಸುಭದ್ರ

7
ಕ್ರಿಕೆಟ್‌: ಭಾರತ ‘ಎ’ ತಂಡದ ಹಾದಿ ಕಠಿಣ, ರಸೂಲ್‌ ಮಡಿಲಿಗೆ ಐದು ವಿಕೆಟ್‌

ಫುದದಿನ್ ಬಲ: ವಿಂಡೀಸ್ ಸುಭದ್ರ

Published:
Updated:
ಫುದದಿನ್ ಬಲ: ವಿಂಡೀಸ್ ಸುಭದ್ರ

ಮೈಸೂರು: ಗುರುವಾರ ಮಧ್ಯಾಹ್ನದವರೆಗೂ ಆತಿಥೇಯ ಬೌಲರ್ ಗಳನ್ನು ತಮ್ಮ ‘ಆಮೆ ವೇಗ’ದ  ಬ್ಯಾಟಿಂಗ್ ಮೂಲಕ ಗೋಳಾಡಿಸಿದ ಅಸದ್ ಫುದದಿನ್ ಆಟದ ನೆರವಿನಿಂದ ವೆಸ್ಟ್ ಇಂಡಿಸ್ ‘ಎ’ ತಂಡವು ಸುಭದ್ರ ಸ್ಥಿತಿಯಲ್ಲಿದೆ.ಗಂಗೋತ್ರಿ ಗ್ಲೇಡ್ಸ್ ನಲ್ಲಿ ನಡೆಯುತ್ತಿರುವ ‘ಎ’ ಟೆಸ್ಟ್ ಸರಣಿಯ ಮೊದಲ ಪಂದ್ಯದ  ಪ್ರಥಮ ಇನಿಂಗ್ಸ್ ನಲ್ಲಿ ಬುಧವಾರ 5 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದ್ದ ವಿಂಡೀಸ್ ತಂಡದ ಮೊತ್ತವು 429 ರನು್ನಗಳಿಗೆ ಹಿಗ್ಗಲು ಎಡಗೈ ಬ್ಯಾಟ್ಸ್ ಮನ್  ಅಸದ್ (ಔಟಾಗದೇ 86; 277ನಿಮಿಷಗಳು, 201ಎಸೆತ, 10ಬೌಂಡರಿ, 1 ಸಿಕ್ಸರ್)  ಆಟ ಕಾರಣವಾಯಿತು. ತಮ್ಮ ನಾಯಕ ಎಡ್ವರ್ಡ್ಸ್ ಬುಧವಾರ  ‘380 ರಿಂದ 400 ರನ್ನುಗಳವರೆಗಿನ ಮೊತ್ತದ ಸವಾಲನ್ನು ಎದುರಾಳಿಗಳಿಗೆ ಕೊಡುತ್ತೇವೆ‘ ಎಂದು ಹೇಳಿದ್ದನ್ನು  ಅಸದ್ ನೆರವೇರಿಸಿದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ‘ಎ’ ತಂಡದ ನಾಯಕ ಪೂಜಾರ ಪಶ್ಚಾತ್ತಾಪ ಪಡುವಂತಾ­ಯಿತು. ಇನಿಂಗ್ಸ್ ಆರಂಭಿಸಿರುವ ಭಾರತ ‘ಎ‘ ತಂಡವು 43 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 124 ರನ್ ಮಾತ್ರ ಗಳಿಸಿದೆ. ಮೊದಲ ಇನಿಂಗ್ಸ್ ಬಾಕಿ ಚುಕ್ತಾ ಮಾಡಲು 305 ರನ್ನುಗಳು ಬೇಕಾಗಿದ್ದು,  ಮನಪ್ರೀತ್ ಜುನೇಜ (ಬ್ಯಾಟಿಂಗ್ 47, 103ನಿ, 77ಎಸೆತ, 7ಬೌಂಡರಿ) ಮತ್ತು ಹರ್ಷದ್ ಖಡಿವಾಲೆ (ಬ್ಯಾಟಿಂಗ್ 5; 43ನಿ, 36ಎಸೆತ) ಕ್ರೀಸ್ ನಲ್ಲಿದ್ದಾರೆ.ಮೊದಲ ದಿನ ಎರಡು ವಿಕೆಟ್ ಪಡೆದಿದ್ದ ಪರ್ವೇಜ್ ರಸೂಲ್ (45–13–116–5) ಎರಡನೇ ದಿನ ಮತ್ತೆ ಮೂರು ವಿಕೆಟ್ ಕಬಳಿಸಿ, ಐದು ವಿಕೆಟ್ ಪಡೆದ ಸಾಧನೆ ಮಾಡಿದರು.ಅಸದ್ ಸಾಧನೆ: ಬುಧವಾರ ದಿನದಾಟದ ಅಂತ್ಯಕ್ಕೆ 4 ರನ್ (65ಎಸೆತಗಳು) ಗಳಿಸಿ ಕ್ರೀಸ್ ನಲ್ಲಿದ್ದ ಅಸದ್ ಎರಡನೇ ದಿನ ತಮ್ಮ ಆಟಕ್ಕೆ ಅಲ್ಪ ವೇಗ ನೀಡಿದರು. ಇನ್ನೊಂದು ಬದಿಯಲ್ಲಿದ್ದ  ಶಡ್ವಿಕ್ ವಾಲ್ಟನ್  (35; 48ನಿಮಿಷ, 41ಎಸೆತ, 4ಬೌಂಡರಿ, 2ಸಿಕ್ಸರ್) ರಸೂಲ್ ಹಾಕಿದ  ಮೊದಲ ಓವರ್ ನಲ್ಲಿ ಒಂದು ರನೌಟ್ ಅಪಾಯದಿಂದ ಪಾರಾದ ಅವರು, ಇನ್ನೊಂದು ಎಸೆತವನ್ನು ಸಿಕ್ಸರ್ ಎತ್ತಿದ್ದರು.  ತಮ್ಮ ನಿನ್ನೆಯ 26 ರನ್ನುಗಳಿಗೆ 9 ರನ್ ಸೇರಿಸಿದ್ದಾಗ ಈಶ್ವರ್ ಪಾಂಡೆ ಎಸೆತದಲ್ಲಿ  ಎಲ್ ಬಿಡಬ್ಲ್ಯು ಆದರು. ಆಗ ಫುದದಿನ್ ಕೇವಲ 7 ರನ್ ಮಾಡಿದ್ದರು. ನಂತರ ಬಂದ ನಿಕಿತ ಮಿಲ್ಲರ್ ಬಿರುಸಿನ ಆಟ ಆರಂಭಿಸಿದರು.ಅಸದ್  ತಾವಾಡಿದ 85ನೇ ಎಸೆತದಲ್ಲಿ ಮೊದಲ ಬೌಂಡರಿ ಗಳಿಸಿದರು.  ಅವರು 16 ರನ್ ಗಳಿಸಿದ್ದಾಗ, ರಸೂಲ್ ಬೌಲಿಂಗ್ ನಲ್ಲಿ  ಪಡೆದ ಜೀವದಾನ ದುಬಾರಿಯಾಯಿತು. ಮಿಲ್ಲರ್ ಜೊತೆಗೆ 7ನೇ ವಿಕೆಟ್ ಜೊತೆಯಾಟದಲ್ಲಿ 88 ರನ್ (143ಎಸೆತ, 103ನಿ) ರನ್ ಸೇರಿಸಿದರು. ಅದರಲ್ಲಿ ಮಿಲ್ಲರ್ ಪಾಲು 49 ರನ್. ಈ ಎಡಗೈ ಬ್ಯಾಟ್ಸ್ ಮನ್  ಅರ್ಧಶತಕ ಪೂರೈಸುವ ಧಾವಂತದಲ್ಲಿ ರಸೂಲ್ ಎಸೆತವನ್ನು ಕವರ್ ನತ್ತ ತಳ್ಳಿ  ರನ್ ಪಡೆಯಲು ಧಾವಿಸಿದರು. ಅವರಿಗೆ ಅಸದ್  ಸ್ಪಂದಿಸಲಿಲ್ಲ. ಅರ್ಧ ಹಾದಿ ಬಂದಿದ್ದ  ಮಿಲ್ಲರ್   ಮರಳುವಷ್ಟರಲ್ಲಿ, ಕವರ್ಸ್ ನಲ್ಲಿದ್ದ ಚೇತೇಶ್ವರ್ ಪೂಜಾರ ಎಸೆತವನ್ನು ಹಿಡಿತಕ್ಕೆ ಪಡೆದ ವಿಕೆಟ್ ಕೀಪರ್ ಮೋಟ್ವಾನಿ ಬೇಲ್ಸ್ ಎಗರಿಸಿದರು. ಊಟದ ನಂತರ ಬಿರುಸಿನ  ಅಸದ್  ವೀರಸ್ವಾಮಿ ಪೆರುಮಾಳ್ ಜೊತೆಗೆ 8ನೇ ವಿಕೆಟ್ ಪಾಲುದಾರಿಕೆಯಲ್ಲಿ 42 ರನ್ ಸೇರಿಸಿ, ಮೊತ್ತವನ್ನು 400ರ ಗಡಿ ದಾಟಿಸಿದರು. ಅದಕ್ಕೂ ಮುನ್ನ ತಮ್ಮ ಲೀಸ್ಟ್ ‘ಎ‘ ದರ್ಜೆಯ 5ನೇ ಅರ್ಧಶತಕ ಪೂರೈಸಿದರು. ರಸೂಲ್ ಎಸೆತದಲ್ಲಿ ಪೂಜಾರಗೆ ಕ್ಯಾಚ್ ಕೊಟ್ಟ ಪೆರುಮಾಳ್ ನಿರ್ಗಮಿಸಿದರು. ಡಿಯೋನ್ ಜಾನ್ಸನ್ ಒಂದೂ ರನ್ ಗಳಿಸದೇ ರಸೂಲ್ ಗೆ ನಾಲ್ಕನೇ ಬಲಿಯಾದರು. ಕೊನೆಯ ಬ್ಯಾಟ್ಸ್ ಮನ್ ಮಿಗೇಲ್ ಕಮಿಂಗ್ಸ್   ಅವರನ್ನು ರಸೂಲ್ ಎಲ್ ಬಿಡಬ್ಲ್ಯು ಬಲೆಗೆ ಬೀಳಿಸಿದರು.   ಅಸದ್ ಲೀಸ್ಟ್ ‘ಎ‘ ಪಂದ್ಯದ ತಮ್ಮ ಅತು್ಯತ್ತಮ ಸ್ಕೋರ್ ದಾಖಲಿಸಿ ಅಜೇಯರಾಗುಳಿದರು.ರಾಹುಲ್–ಜುನೇಜ ಜುಗಲಬಂದಿ:

ಮೊದಲ ದಿನಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರಿಗೆ ಸ್ವಲ್ಪ ಮಟ್ಟಿಗೆ ಮನರಂಜನೆ ಸಿಕ್ಕಿದ್ದು ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ ಮತ್ತು ಮನಪ್ರೀತ್ ಜುನೇಜ ಅವರ ಬ್ಯಾಟಿಂಗ್ ನಿಂದ. ಜೀವನಜ್ಯೋತ್ ಸಿಂಗ್ ಜೊತೆಗೆ ಮೊದಲ ಇನಿಂಗ್ಸ್ ಆರಂಭಿಸಿದ ರಾಹುಲ್,  ಆಕರ್ಷಕ ಡ್ರೈವ್ ಮತ್ತು ಕಟ್ ಗಳ ಮೂಲಕ ಆಕರ್ಷಕ ಬೌಂಡರಿ  ಹೊಡೆದರು. ಸಿಂಗ್ ತಕ್ಕ ಸಾಥ್ ನೀಡಿದರು. ಚಹಾ ವಿರಾಮಕ್ಕೆ ವಿಕೆಟ್ ನಷ್ಟವಿಲ್ಲದೇ 25 ರನ್ನುಗಳು ‘ಡಿಜಿಟಲ್ ಸ್ಕೋರ್ ಬೋರ್ಡ್’ ನಲ್ಲಿ ಮಿಂಚುತ್ತಿದ್ದವು. ನಂತರದ ಅವಧಿಯಲ್ಲಿ ವೀರಸ್ವಾಮಿ ಪೆರುಮಾಳ್ ಅವರ ಕೆಳಮಟ್ಟದ ಎಸೆತವನ್ನು ಹೊಡೆಯುವ ಯತ್ನದಲ್ಲಿ ಸಿಂಗ್ ವಿಕೆಟ್ ಕೀಪರ್ ವಾಲ್ಟನ್ ಗೆ ಕ್ಯಾಚ್ ನೀಡಿದಾಗ ಆಗ ಪ್ರೇಕ್ಷಕ ವರ್ಗದಲ್ಲಿ ಸಂತಸದ ಕೇಕೆ, ಚಪ್ಪಾಳೆಗಳು ಪ್ರತಿಧ್ವನಿಸಿದವು. ಅದು ಚೇತೇಶ್ವರ್ ಪೂಜಾರ ಅವರಿಗೆ ಸ್ವಾಗತವಾಗಿತ್ತು.  ಬರೀ 9 ಎಸೆತ ಎದುರಿಸಿದ ಪೂಜಾರ ಕಮ್ಮಿಂಗ್ಸ್ ಎಸೆತದಲ್ಲಿ ಕಿರನ್ ಪೋವೆಲ್ ಗೆ ಕ್ಯಾಚ್ ಆಗಿ ನಿರ್ಗಮಿಸಿದಾಗ, ಅಭಿಮಾನಿಗಳಲ್ಲಿ ಮೌನ ಕವಿಯಿತು.  ನಂತರ ಬಂದ ಜುನೇಜ ಬೇಸರ ಕಳೆದರು. ರಾಹುಲ್ ಜೊತೆಗೆ ಪಟಪಟನೆ ರನ್ ಗಳಿಸಿದ ಜುನೇಜ, 25ನೇ ಓವರ್ ನಲ್ಲಿ ಪೆರುಮಾಳ್ ಅವರ ಮೂರು ಎಸೆತಗಳನ್ನು ಸತತವಾಗಿ ಬೌಂಡರಿ ಗೆರೆ ದಾಟಿಸಿದರು.ಇತ್ತ ಅರ್ಧಶತಕದತ್ತ ಸಾಗುತ್ತಿದ್ದ ರಾಹುಲ್, ನಿಕಿತ್ ಮಿಲ್ಲರ್ ಬೌಲಿಂಗ್ ನಲ್ಲಿ ಹೊರಹೊಗುತ್ತಿದ್ದ ಎಸೆತವನ್ನು ತಡವಿ ಮೊದಲ ಸ್ಲಿಪ್ ನಲ್ಲಿದ್ದ ಜಾನ್ಸನ್ ಕೈ ಸೇರಿದರು.  ಇವರಿಬ್ಬರೂ ಮೂರನೇ ವಿಕೆಟ್ ಗೆ 60 ರನ್ ಸೇರಿಸಿದರು. ಜುನೇಜ ಮತ್ತು ಹರ್ಷದ್ ಖಡಿವಾಲೆ ವಿಕೆಟ್ ಪತನಗೊಳ್ಳದಂತೆ ಎಚ್ಚರಿಕೆಯ ಆಟ ಮುಂದುವರೆಸಿದ್ದಾರೆ,

 

                                ಸ್ಕೋರ್ ವಿವರ

ವೆಸ್ಟ್ ಇಂಡೀಸ್ ‘ಎ’ ಪ್ರಥಮ ಇನಿಂಗ್ಸ್ 135 ಓವರುಗಳಲ್ಲಿ 429 (ಮೊದಲ ದಿನ: 90 ಓವರುಗಳಲ್ಲಿ 5 ವಿಕೆಟ್ ಗೆ 264)

ಅಸದ್ ಫುದದಿನ್ ಅಜೇಯ  86

ಶಡ್ವೀಕ್ ವಾಲ್ಟನ್ ಎಲ್ ಬಿಡಬ್ಲು್ಯ ಈಶ್ವರ್ ಪಾಂಡೆ  35

ಮಿಲ್ಲರ್ ರನೌಟ್ (ಚೇತೇಶ್ವರ್ ಪೂಜಾರ/ಮೋಟ್ವಾನಿ)  49

ವೀರಸ್ವಾಮಿ ಪೆರುಮಾಳ್ ಸಿ ಪೂಜಾರ ಬಿ ರಸೂಲ್  11

ಡಿಯೋನ್ ಜಾನ್ಸನ್ ಸಿ ಮೊಹಮ್ಮದ್ ಶಮಿ ಬಿ ರಸೂಲ್  00

ಮಿಗೆಲ್ ಕಮಿಂಗ್ಸ್ ಎಲ್ ಬಿಡಬ್ಲು್ಯ ಪರ್ವೇಜ್ ರಸೂಲ್  06

ಇತರೆ: 21 (ಬೈ 7, ಲೆಗ್ ಬೈ 9, ನೋಬಾಲ್ 5)

ವಿಕೆಟ್ ಪತನ: 6–276 (ವಾಲ್ಟನ್ 93.2), 7–364 (ಮಿಲ್ಲರ್ 116.6), 8–406 (ಪೆರುಮಾಳ್ 126.6), 9–412 (ಜಾನ್ಸನ್ 128.4), 10–429 (ಕಮಿಂಗ್ಸ್ 134.6).

ಬೌಲಿಂಗ್: ಮೊಹಮ್ಮದ್ ಶಮಿ 21–2–75–1 (ನೋಬಾಲ್ 1), ಈಶ್ವರ್ ಪಾಂಡೆ 27–7–69–2, ಅಶೋಕ ದಿಂಡಾ 25–2–80–0 (ನೋಬಾಲ್ 4),  ಪರ್ವೇಜ್ ರಸೂಲ್ 45–13–116–5, ರಜತ್ ಪಲಿವಾಲಾ

13–3–56–1, ಹರ್ಷದ್ ಖಡಿವಾಲೆ 4–0–17–0.ಭಾರತ ‘ಎ‘ ಪ್ರಥಮ ಇನಿಂಗ್ಸ್: 43 ಓವರುಗಳಲ್ಲಿ  3 ವಿಕೆಟ್‌ಗಳಿಗೆ 124

ಜೀವನಜ್ಯೋತ್ ಸಿಂಗ್ ಸಿ ಶಡ್ವಿಕ್ ವಾಲ್ಟನ್ ಬಿ ಪೆರುಮಾಳ್ 16

ಕೆ.ಎಲ್. ರಾಹುಲ್ ಸಿ ಡಿಯೋನ್ ಜಾನ್ಸನ್ ಬಿ ಮಿಲ್ಲರ್  46

ಚೇತೇಶ್ವರ್ ಪೂಜಾರ ಸಿ ಕಿರನ್ ಪೋವೆಲ್ ಬಿ ಕಮಿಂಗ್ಸ್  03

ಮನಪ್ರೀತ್ ಜುನೇಜಾ ಬ್ಯಾಟಿಂಗ್  47

ಹರ್ಷದ್ ಖಡಿವಾಲೆ  ಬ್ಯಾಟಿಂಗ್  05

ಇತರೆ:  (ಬೈ 4, ನೋಬಾಲ್ 3)  07

ವಿಕೆಟ್ ಪತನ: 1–45 (ಸಿಂಗ್ 14.4), 2–49 (ಪೂಜಾರ 17.1), 3–109 (ರಾಹುಲ್ 30.6),

ಬೌಲಿಂಗ್: ಮಿಗೆಲ್ ಕಮಿಂಗ್ಸ್ 12–1–37–1 (ನೋಬಾಲ್ 3), ಡಿಯೋನ್ ಜಾನ್ಸನ್ 9–3–28–0, ವೀರಸ್ವಾಮಿ ಪೆರುಮಾಳ್ 13–2–45–1, ನಿಕಿತ ಮಿಲ್ಲರ್ 9–4–10–1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry