ಶನಿವಾರ, ಜೂನ್ 12, 2021
28 °C

ಫೆಡರರ್ ಮಡಿಲಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ವೆಲ್ಸ್, ಕ್ಯಾಲಿಫೋರ್ನಿಯ (ಐಎಎನ್‌ಎಸ್): ರೋಜರ್ ಫೆಡರರ್ ಇಲ್ಲಿ ಕೊನೆಗೊಂಡ ಬಿಎನ್‌ಪಿ ಪರಿಬಸ್ ಓಪನ್ ಟೆನಿಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡರು.ಭಾನುವಾರ ನಡೆದ ಫೈನಲ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಆಟಗಾರ 7-6, 6-3 ರಲ್ಲಿ ಅಮೆರಿಕದ ಜಾನ್ ಇಸ್ನೆರ್ ವಿರುದ್ಧ ಗೆಲುವು ಪಡೆದರು. ಫೆಡರರ್ ಮೊದಲ ಸೆಟ್‌ನಲ್ಲಿ ಮಾತ್ರ ಅಲ್ಪ ಪ್ರತಿರೋಧ ಎದುರಿಸಿದರು. ಸೆಮಿಫೈನಲ್‌ನಲ್ಲಿ ಇಸ್ನೆರ್ ಅಗ್ರ ರ್‍ಯಾಂಕಿಂಗ್‌ನ ಆಟಗಾರ ನೊವಾಕ್ ಜೊಕೊವಿಚ್‌ಗೆ ಆಘಾತ ಉಂಟುಮಾಡಿದ್ದರು.

ಎಂಇಜಿ ತಂಡ ಚಾಂಪಿಯನ್

ಬೆಂಗಳೂರು: ಎಂಇಜಿ ತಂಡದವರು ಇಲ್ಲಿ ಕೊನೆಗೊಂಡ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ರಾಜ್ಯ `ಎ~ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಲೀಗ್ಪಂದ್ಯದಲ್ಲಿ ಎಂಇಜಿ ತಂಡ 67-63 ಪಾಯಿಂಟ್‌ಗಳಿಂದ ವಿಜಯಾ ಬ್ಯಾಂಕ್ ತಂಡವನ್ನು ಮಣಿಸಿತು.ಎಂಇಜಿ ತಂಡದವರು ವಿರಾಮದ ವೇಳೆಗೆ 29-28ರಲ್ಲಿ ಮುನ್ನಡೆ ಹೊಂದಿದ್ದರು.ಈ ತಂಡದ ಅಮಿತ್ ಹಾಗೂ ಬಾಬು ಕ್ರಮವಾಗಿ 17 ಮತ್ತು 10 ಪಾಯಿಂಟ್‌ಗಳನ್ನು ಕಲೆ ಹಾಕಿದರು. ವಿಜಯಾ ತಂಡದ ಬಸವರಾಜ್   (23 ಪಾಯಿಂಟ್), ಶ್ರೀನಿವಾಸ್ ನಾಯಕ್ (21) ಗಳಿಸಿ ಎದುರಾಳಿ ತಂಡಕ್ಕೆ ಪ್ರಬಲ ಪೈಫೋಟಿ ಒಡ್ಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.