ಫೆಡರಲ್ ಬ್ಯಾಂಕ್: ರಾಜ್ಯದಲ್ಲಿ 10 ಹೊಸ ಶಾಖೆ ಆರಂಭ

7

ಫೆಡರಲ್ ಬ್ಯಾಂಕ್: ರಾಜ್ಯದಲ್ಲಿ 10 ಹೊಸ ಶಾಖೆ ಆರಂಭ

Published:
Updated:

ಬೆಂಗಳೂರು: ಖಾಸಗಿ ವಲಯದ ಫೆಡರಲ್ ಬ್ಯಾಂಕ್, ತನ್ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ದೇಶದಾದ್ಯಂತ 66 ಹೊಸ ಶಾಖೆಗಳನ್ನು ಪ್ರಾರಂಭಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬ್ಯಾಂಕಿನ ಬೆಂಗಳೂರು ವಲಯದ ಉಪ ಪ್ರಧಾನ ವ್ಯವಸ್ಥಾಪಕ ಆರ್.ಶಿವಕುಮಾರ್, ರಾಜ್ಯದಲ್ಲಿ ಹತ್ತು ಹೊಸ ಶಾಖೆಗಳು ಮತ್ತು 4 ಎಟಿಎಂಗಳನ್ನು ತೆರೆಯಲಾಗಿದೆ ಎಂದರು.`ನಗರದ ಜೆ.ಪಿ. ನಗರ, ಎಚ್‌ಎಸ್‌ಆರ್ ಬಡಾವಣೆಗಳಲ್ಲಿ ಎರಡು ಹಾಗೂ ರಾಜ್ಯದ ಉಳಿದೆಡೆ ಎಂಟು ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಬ್ಯಾಂಕಿನ ಶಾಖೆಗಳ ಸಂಖ್ಯೆ 823 ಹಾಗೂ ಎಟಿಎಂಗಳ ಸಂಖ್ಯೆ 868ಕ್ಕೆ ಏರಿದೆ. 2012ರ ಡಿಸೆಂಬರ್ ಒಳಗೆ ಶಾಖೆಗಳ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸುವ ಗುರಿ ಇದೆ~ ಎಂದರು.

`ಸದ್ಯ ಬ್ಯಾಂಕಿನ ಒಟ್ಟು ವಹಿವಾಟು ರೂ 81 ಸಾವಿರ ಕೋಟಿಗಳಷ್ಟಿದೆ. ಇದು ಮುಂದಿನ 14 ತಿಂಗಳಲ್ಲಿ ರೂ  1 ಲಕ್ಷ ಕೋಟಿಗಳಷ್ಟಾಗುವ ನಿರೀಕ್ಷೆ ಇದೆ~ ಎಂದರು.`ಬ್ಯಾಂಕಿನ ಬೆಂಗಳೂರು ವಲಯದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಆಂಧ್ರ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 80 ಶಾಖೆಗಳಿವೆ. ಕರ್ನಾಟಕ ಒಂದರಲ್ಲೇ 60 ಶಾಖೆಗಳಿವೆ. ಮಾರ್ಚ್ ಅಂತ್ಯದ ಒಳಗೆ ಇನ್ನು 25 ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಕರ್ನಾಟಕದಲ್ಲಿ ಕೃಷಿ ಮತ್ತು ವಸತಿ ಸಾಲ ನೀಡಿಕೆಗೆ ಆದ್ಯತೆ ನೀಡಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry