ಶನಿವಾರ, ಜನವರಿ 25, 2020
16 °C
ಭಾರತ ಕ್ರೀಡಾ ಪ್ರಾಧಿಕಾರದ ಮಹತ್ವದ ನಿರ್ಧಾರ

ಫೆಡರೇಷನ್‌ಗಳಿಗೆ ಸಿಇಒ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಆಡಳಿತದಲ್ಲಿ ವೃತ್ತಿಪರತೆ ತರುವ ಉದ್ದೇಶದಿಂದ ಅರ್ಹ ಸಿಇಒಗಳನ್ನು ನೇಮಿಸಲು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನಿರ್ಧರಿಸಿದೆ.ಕ್ರೀಡಾ ಸಚಿವ ಜಿತೇಂದ್ರ ಸಿಂಗ್‌ ಸಾರಥ್ಯದಲ್ಲಿ ನಡೆದ ಪ್ರಾಧಿಕಾರದ 42ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಎಲ್ಲಾ ಫೆಡರೇಷನ್‌ಗಳ ಸಿಇಒ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ವೇತನವನ್ನು ಪ್ರಾಧಿ ಕಾರವೇ ಭರಿಸಲಿದೆ. ಆದರೆ ಅಧಿಕಾರಿ ಗಳ ನೇಮಕಾತಿ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬಾರದು ಎಂಬ ನಿರ್ಧಾರವನ್ನೂ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.ಸಿಇಒ ನೇಮಕ ಸಂಬಂಧ ಕ್ರೀಡಾ ಸಚಿವಾಲಯವು ಕ್ರೀಡಾ ಫೆಡರೇಷನ್‌ ಗಳ ಅಭಿಪ್ರಾಯ ಕೋರಿ ಅಕ್ಟೋಬರ್‌ ನಲ್ಲಿಯೇ ಪತ್ರ ಬರೆದಿತ್ತು. ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಫುಟ್‌ಬಾಲ್‌, ಕೆನೊ ಯಿಂಗ್‌/ ಕಯಾಕಿಂಗ್‌, ಜಿಮ್ನ್ಯಾಸ್ಟಿಕ್‌, ಹಾಕಿ, ರೋಯಿಂಗ್‌, ಶೂಟಿಂಗ್‌, ಈಜು, ಕುಸ್ತಿ, ವುಷು ಹಾಗೂ ಶಾಲಾ ಕ್ರೀಡಾ ಫೆಡರೇಷನ್‌ಗಳಿಗೆ ಈ ಪತ್ರ ಬರೆಯಲಾಗಿತ್ತು.ಆದರೆ ಸಚಿವಾಲಯದ ಈ ಸಲಹೆಯನ್ನು ಕ್ರೀಡಾ ಫೆಡರೇಷನ್‌ ಗಳು ತಿರಸ್ಕರಿಸಿದ್ದವು. ಫೆಡರೇಷನ್‌ ಗಳನ್ನು ವೃತ್ತಿಪರತೆಯಿಂದ ನಡೆಸ ಲಾಗುತ್ತಿದೆ ಹಾಗೂ ಸಿಇಒಗಳ ಅಗತ್ಯವಿಲ್ಲ ಎಂದು ತಿಳಿಸಿದ್ದವು. ಈಗ ಪ್ರಾಧಿಕಾರ ತೆಗೆದುಕೊಂಡಿರುವ ಈ ನಿರ್ಧಾರ ಫೆಡರೇಷನ್‌ಗಳ ಪದಾಧಿಕಾರಿಗಳಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.ದೇಶದಲ್ಲಿ ಒಟ್ಟು 54 ಕ್ರೀಡಾ ಫೆಡರೇಷನ್‌ಗಳಿವೆ. ಸದ್ಯ ಹಾಕಿ ಹಾಗೂ ಬ್ಯಾಸ್ಕೆಟ್‌ಬಾಲ್‌ ಫೆಡರೇ ಷನ್‌ಗಳು ಮಾತ್ರ ಸಿಇಒ ಹೊಂದಿವೆ. ಕ್ರೀಡಾ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಆಸ್ಟ್ರೇಲಿಯಾ ದ ಎಲೆನಾ ನೋರ್ಮನ್‌ ಅವರು ಹಾಕಿ ಇಂಡಿಯಾದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ ವಸ್ತು ಸಂಗ್ರಹಾಲಯ ನಿರ್ಮಿಸುವ ತೀರ್ಮಾನವನ್ನೂ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)