ಫೆಡ್ ಕಪ್: ಪ್ಲೇ ಆಫ್‌ಗೆ ಅರ್ಹತೆ ಪಡೆದ ಭಾರತ

7

ಫೆಡ್ ಕಪ್: ಪ್ಲೇ ಆಫ್‌ಗೆ ಅರ್ಹತೆ ಪಡೆದ ಭಾರತ

Published:
Updated:

ಶೆನ್‌ಜೆನ್, ಚೀನಾ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫೆಡ್ ಕಪ್ ಟೆನಿಸ್ ಟೂರ್ನಿಯ ಪ್ಲೇ ಆಫ್ ಹಂತದಲ್ಲಿ ಪೈಪೋಟಿ ನಡೆಸಲು ಅರ್ಹತೆ ಪಡೆದಿದ್ದು, ಏಷ್ಯಾ ಒಸಿನಿಯಾ ಗುಂಪು-1ರಲ್ಲಿ ಆಡಲು ಬಡ್ತಿ ಪಡೆಯುವ ನಿರೀಕ್ಷೆ ಇದೆ.ಶುಕ್ರವಾರ ನಡೆದ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತ 2-1ರಲ್ಲಿ  ಪಿಲಿಪ್ಪಿನ್ಸ್ ಎದುರು ಗೆಲುವು ಪಡೆಯಿತು. ಈ ಮೂಲಕ `ಬಿ~ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.ಮೊದಲ ಪಂದ್ಯದಲ್ಲಿ ಋತುಜಾ ಭೋಸಲೆ 6-2, 6-3ರಲ್ಲಿ ತಮಿತಾ ನುಯೆನ್ ಎದುರು ಗೆದ್ದು 1-0 ಮುನ್ನಡೆ ತಂದುಕೊಟ್ಟರು.ಆದರೆ ಎರಡನೇ ಪಂದ್ಯದಲ್ಲಿ ಪ್ರೇರಣಾ ಭಾಂಬ್ರಿ 6-3, 4-6, 2-6ರಲ್ಲಿ ಅನಾ ಕ್ಲಾರಿಸ್ ಪ್ಯಾಟ್ರಿಮೊನಿಯಾ ಎದುರು ಪರಾಭವಗೊಂಡರು.ಆದರೆ ನಿರ್ಣಾಯಕ ಪಂದ್ಯದಲ್ಲಿ ಇಶಾ ಲಖಾನಿ ಜೊತೆಗೂಡಿ ಆಡಿದ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ 6-0, 6-1ರಲ್ಲಿ ಪ್ಯಾಟ್ರಿಮೊನಿಯಾ ಹಾಗೂ ತಮಿತಾ ಅವರನ್ನು ಸೋಲಿಸಿದರು. ಈ ಪಂದ್ಯವು ಏಕಪಕ್ಷೀಯವಾಗಿ ಕೊನೆಗೊಂಡಿತು.ಭಾರತ ಮುಂದಿನ ತನ್ನ ಪಂದ್ಯದಲ್ಲಿ `ಎ~ ಗುಂಪಿನ ವಿಜೇತರಾದ ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಕರ್ನಾಟಕದ ಶರ್ಮದಾ ಬಾಲು ಅವರು ಕೂಡ ಈ ತಂಡದಲ್ಲಿದ್ದು ಆಡುವ ಅವಕಾಶಕ್ಕಾಗಿ ಕಾಯ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry