ಫೆಲಿಕ್ಸ್ ವೇಗದ ದಾಖಲೆ ದೃಢ

7

ಫೆಲಿಕ್ಸ್ ವೇಗದ ದಾಖಲೆ ದೃಢ

Published:
Updated:
ಫೆಲಿಕ್ಸ್ ವೇಗದ ದಾಖಲೆ ದೃಢ

ಲಂಡನ್ (ಐಎಎನ್‌ಎಸ್):  ಬಿಸಿಗಾಳಿ ಬಲೂನಿನಲ್ಲಿ 39 ಕಿ.ಮೀ. ಎತ್ತರಕ್ಕೇರಿ ಶಬ್ದದ ವೇಗವನ್ನೂ ಮೀರಿಸಿ ಭೂಮಿಗೆ ಧುಮುಕಿದ ಆಸ್ಟ್ರಿಯಾದ ಸ್ಕೈಡೈವರ್  ಫೆಲಿಕ್ಸ್ ಬಾಮ್‌ಗಾರ್ಟ್ನರ್ ನಿರ್ಮಿಸಿರುವ ಹೊಸ ವಿಶ್ವ ದಾಖಲೆ ದೃಢಪಟ್ಟಿದೆ.ಶಬ್ದದ ವೇಗ ಗಂಟೆಗೆ 1,236 ಕಿ.ಮೀ. ಇದ್ದರೆ, ಫೆಲಿಕ್ಸ್ ಗಂಟೆಗೆ 1,342 ಕಿ.ಮೀ ವೇಗದಲ್ಲಿ ಭೂಮಿ ತಲುಪಿರುವುದು ಸಾಬೀತಾಗಿದೆ ಎಂದು `ಬಿಬಿಸಿ~ ವರದಿಮಾಡಿದೆ.1960ರಲ್ಲಿ ಜೋಸೆಫ್ ಕಿಟ್ಟಿಂಜರ್ ಎಂಬ ಸ್ಕೈಡೈವರ್ 1,02,500 ಅಡಿ ಎತ್ತರದಿಂದ ಜಿಗಿದು ದಾಖಲೆ ನಿರ್ಮಿಸಿದ್ದರು. ಅದನ್ನು ಈಗ ಫೆಲಿಕ್ಸ್ ಮುರಿದಿದ್ದಾರೆ.`ಇಂಥ ವಿಶೇಷ ಸಾಧನೆ ಮಾಡಿದಾಗ ಮನದಲ್ಲಿ ವಿನಮ್ರ ಭಾವ ಮೂಡುತ್ತದೆ. ಇನ್ನೆಂದೂ ದಾಖಲೆ ನಿರ್ಮಿಸುವ ಆಲೋಚನೆ ಬರುವುದೇ ಇಲ್ಲ. ಬದುಕುಳಿದರೆ ಸಾಕು ಎಂಬಂತಾಗುತ್ತದೆ~ ಎಂದು ಬಾಮ್‌ಗಾರ್ಟ್ನರ್ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry