ಫೆವಿಕಾಲ್‌ನಿಂದ ಶ್ರಮಾದಾನ

7

ಫೆವಿಕಾಲ್‌ನಿಂದ ಶ್ರಮಾದಾನ

Published:
Updated:
ಫೆವಿಕಾಲ್‌ನಿಂದ ಶ್ರಮಾದಾನ

ದೇಶದ ವಿವಿಧೆಡೆಯಿಂದ ಬಂದಿದ್ದ ಮರಗೆಲಸದವರು, (ಕಾರ್ಪೆಂಟರ್) ತಮ್ಮ ಒಂದು ದಿನದ ಶ್ರಮವನ್ನು ವಿವಿಧ ಎನ್‌ಜಿಒ ಮತ್ತು ಸಂಘಟನೆಗಳಲ್ಲಿ ದುರಸ್ತಿ ಕೆಲಸ ನಿರ್ವಹಿಸಲು ವಿನಿಯೋಗಿಸಿದರು. ಈ ವರ್ಷ ತಮ್ಮ ಸೇವೆಯನ್ನು ಅಗತ್ಯವಿರುವ ಶಾಲೆಗಳಿಗೆ ವಿನಿಯೋಗಿಸಿದ್ದು ಮತ್ತೊಂದು ವಿಶೇಷ. ಅಂದಹಾಗೆ, ಇದು ಪಿಡಿಲೈಟ್ ಇಂಡಸ್ಟ್ರೀಸ್ ಲಿಮಿಟೆಡ್ ಜತೆಗೂಡಿ ಫೆವಿಕಾಲ್ ಚಾಂಪಿಯನ್ಸ್ ಕ್ಲಬ್ (ಎಫ್‌ಸಿಸಿ) ಆಯೋಜಿಸಿದ್ದ `ಶ್ರಮದಾನ ದಿವಸ'ದ ವಿಶೇಷ.ಶ್ರಮದಾನ ದಿನದಂದು ದೇಶಾದ್ಯಂತ 306 ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲಾಯಿತು. ಬೆಂಗಳೂರಿನಲ್ಲಿ ಶ್ರಮದಾನ ದಿನವನ್ನು ಸರ್ಕಾರಿ ಪ್ರಾಥಮಿಕ ಶಾಲೆ, ರಾಜರಾಜೇಶ್ವರಿ ಸರ್ಕಾರಿ ಶಾಲೆ, ಸರ್ಕಾರಿ ಉರ್ದು ಉನ್ನತ ಪ್ರಾಥಮಿಕ ಶಾಲೆ, ನ್ಯಾಷನಲ್ ಅಸೋಸಿಯೇಷನ್ ಆಫ್ ಬ್ಲೈಂಡ್ಸ್ ಸ್ಕೂಲ್, ಆನಂದ ಸಂಯುಕ್ತ ಶಾಲೆ, ವಸಂತ ಸವಣೂರು ಬ್ಲೈಂಡ್ಸ್ ಸಂಸ್ಥೆಯಲ್ಲಿ ಆಚರಿಸಲಾಯಿತು.ಕಾಪೆರ್ಂಟರ್‌ಗಳು ಇರುವ ವಿಶೇಷ ಕ್ಲಬ್ ಎಫ್‌ಸಿಸಿ ಆಗಿದ್ದು, 2002ರಲ್ಲಿ ಇದನ್ನು ಸ್ಥಾಪಿಸಲಾಯಿತು. 2011ರಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಎಫ್‌ಸಿಸಿ ಸದಸ್ಯರು ಸಮಾಜದಲ್ಲಿರುವ ನಿರ್ಗತಿಕ ಮಕ್ಕಳಿಗಾಗಿ ಒಂದು ದಿನದ ನೆರವು ನೀಡಲು ನಿರ್ಧರಿಸಿದರು. ಶ್ರಮದಾನ ದಿವಸ ಎಂಬುದು ಸಾಮಾಜಿಕ ಸೇವಾ ಕಾರ್ಯಕ್ರಮವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗದ ಕಲ್ಯಾಣದ ದೃಷ್ಟಿಯಿಂದ ರೂಪಿಸಲಾಗಿದೆ.

ಈ ವರ್ಗದ ಮಕ್ಕಳಿಗೆ ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ ನಾದುರಸ್ತಿಯಲ್ಲಿರುವ ಪೀಠೋಪಕರಣಗಳನ್ನು ದುರಸ್ತಿ ಮಾಡುವ ಮೂಲಕ ನೆರವು ನೀಡಲಾಗುತ್ತಿದೆ. ಕಳೆದ ವರ್ಷ ಒಂಬತ್ತು ಸಾವಿರಕ್ಕೂ ಅಧಿಕ ಕಾರ್ಪೆಂಟರುಗಳು ಒಂದು ದಿನದ ಶ್ರಮವನ್ನು ಇದಕ್ಕಾಗಿ ವಿನಿಯೋಗಿಸಿದ್ದರು. ಈ ವರ್ಷ ದೇಶಾದ್ಯಂತ 15,000ಕ್ಕೂ ಅಧಿಕ ಕಾರ್ಪೆಂಟರುಗಳು ಭಾಗವಹಿಸಿದ್ದರು.`ಫೆವಿಕಾಲ್ ಚಾಂಪಿಯನ್ಸ್ ಕ್ಲಬ್ ಮತ್ತು ಅದರ ಸದಸ್ಯರಿಗೆ ನಾವು ಆಭಾರಿಯಾಗಿದ್ದೇವೆ. ಜಖಂಗೊಂಡ ಪೀಠೋಪಕರಣಗಳನ್ನು ದುರಸ್ತಿಪಡಿಸುವ ಮೂಲಕ ಇವುಗಳ ಮೇಲೆ ಇನ್ನಷ್ಟು ಹಣ ಹೂಡುವುದನ್ನು ತಪ್ಪಿಸಿದ ಈ ಕಾರ್ಯ ನಿಜಕ್ಕೂ ಉತ್ತಮವಾದುದು' ಎಂದು ಬೆಂಗಳೂರಿನ ಆನಂದ ಸಂಯುಕ್ತ ಶಾಲೆಯ ಮುತ್ತು ವರದರಾಜು ಮೆಚ್ಚುಗೆ ವ್ಯಕ್ತಪಡಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry