ಫೆ. 22 ರಿಂದ ಇಡಬ್ಲ್ಯುಸಿಐ-2012 ಸಮ್ಮೇಳನ

7

ಫೆ. 22 ರಿಂದ ಇಡಬ್ಲ್ಯುಸಿಐ-2012 ಸಮ್ಮೇಳನ

Published:
Updated:

ಬೆಂಗಳೂರು: `ಅಸೋಸಿಯೇಷನ್ ಆಫ್ ಒಲ್ಡ್ ಕ್ರೌಸ್‌ನ ಭಾರತೀಯ ಘಟಕ (ಎಒಸಿ) ಮತ್ತು ರಕ್ಷಣಾ ಸಂಶೋಧನ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವತಿಯಿಂದ `ಎಲೆಕ್ಟ್ರಾನಿಕ್ ಯುದ್ಧದ ಪ್ರಕ್ರಿಯೆ ಕುರಿತು -ಇಡಬ್ಲ್ಯುಸಿಐ 2012~ ಅಂತರರಾಷ್ಟ್ರೀಯ ಸಮ್ಮೇಳನವನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಫೆ.22 ರಿಂದ 24 ರ ವರೆಗೆ ಏರ್ಪಡಿಸಲಾಗಿದೆ~ ಎಂದು ಡಿಆರ್‌ಡಿಒ ದ ಮುಖ್ಯ ನಿಯಂತ್ರಕ ಡಾ.ಶ್ರೀಹರಿ ರಾವ್ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗುವುದು. ಒಟ್ಟಿನಲ್ಲಿ 400 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 50 ಮಂದಿ ಪ್ರದರ್ಶಕರು ಎಲೆಕ್ಟ್ರಾನಿಕ್‌ಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ~ ಎಂದರು.`ಅಂತರರಾಷ್ಟ್ರೀಯ ಮಟ್ಟದಲ್ಲಿ ಇಟಲಿ, ಯುಎಸ್‌ಎ, ಕೆನಡಾ, ಫ್ರಾನ್ಸ್, ಇಸ್ರೇಲ್, ಜರ್ಮನಿ, ಸ್ವೀಡನ್, ದಕ್ಷಿಣ ಆಫ್ರಿಕಾ, ಸ್ಪೇನ್ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ. ವಿ.ಕೆ.ಸರಸ್ವತ್ ಉದ್ಘಾಟಿಸಲಿದ್ದಾರೆ~ ಎಂದು ಹೇಳಿದರು.

ಗೋಷ್ಠಿಯಲ್ಲಿ ಎಒಸಿ ಅಧ್ಯಕ್ಷ ಡಾ.ಯು.ಕೆ.ರೇವನಕರ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry