ಫೆ.28ಕ್ಕೆ ಬ್ಯಾಂಕ್ ಮುಷ್ಕರ

7

ಫೆ.28ಕ್ಕೆ ಬ್ಯಾಂಕ್ ಮುಷ್ಕರ

Published:
Updated:

ನವದೆಹಲಿ (ಪಿಟಿಐ): ಸುಸ್ತಿ ಸಾಲದ ಮರು ಪಾವತಿಗೆ ಕಠಿಣ ಕ್ರಮ, ಬ್ಯಾಂಕ್‌ಗಳ ಪ್ರಮುಖವಲ್ಲದ ಕೆಲಸ ಕಾರ್ಯಗಳನ್ನು ಖಾಸಗಿ ವಲಯಕ್ಕೆ ಹೊರಗುತ್ತಿಗೆ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಏಳು ಕಾರ್ಮಿಕ ಸಂಘಟನೆಗಳು ಈ ತಿಂಗಳ 28ರಂದು ಒಂದು ದಿನದ ಮುಷ್ಕರಕ್ಕೆ ಕರೆ ಕೊಟ್ಟಿವೆ.

ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು ದಿನೇ ದಿನೇ ಹೆಚ್ಚುತ್ತಿದೆ. ಇದು ಬ್ಯಾಂಕ್‌ಗಳ ಲಾಭ ಮತ್ತು ಕಾರ್ಯನಿರ್ವಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಸಾಲದ  ಮರು ಪಾವತಿಗೆ ಕಠಿಣ ಕ್ರಮಗಳ ಜಾರಿಗೆ ಒತ್ತಾಯಿಸಿ ಮತ್ತು ಖಂಡೇಲ್‌ವಾಲ್ ಸಮಿತಿಯ ಏಕಪಕ್ಷೀಯ ಶಿಫಾರಸುಗಳ ಜಾರಿ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ತಿಳಿಸಿದ್ದಾರೆ. ಬ್ಯಾಂಕಿಂಗ್ ವಲಯದ ಸುಧಾರಣಾ ಕ್ರಮಗಳು, ಉದ್ಯೋಗಗಳ ಹೊರ ಗುತ್ತಿಗೆಯನ್ನೂ ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಿವೆ. ಈ ಏಳು ಕಾರ್ಮಿಕ ಸಂಘಟನೆಗಳ ಅಂದಾಜು 8 ಲಕ್ಷ ಉದ್ಯೋಗಿಗಳು ಫೆ. 28ರ (ಮಂಗಳವಾರ) ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಮುಷ್ಕರವು ಸಂಪೂರ್ಣವಾಗಿ ಯಶಸ್ವಿಯಾದರೆ ಅದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಹಿವಾಟಿಗೆ ತೀವ್ರ ಧಕ್ಕೆ ತಟ್ಟುವ ಸಾಧ್ಯತೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry