ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಏರಿಕೆ

7

ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಏರಿಕೆ

Published:
Updated:

ಸಾಮಾಜಿಕ ತಾಣ `ಫೇಸ್‌ಬುಕ್' ಬಳಕೆದಾರರ ಸಂಖ್ಯೆ ಭಾರತದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಅಗ್ಗದ ದರದ ಹ್ಯಾಂಡ್‌ಸೆಟ್‌ಗಳ ಮಾರಾಟ ಹೆಚ್ಚಳದಿಂದ ಭಾರತದಲ್ಲಿ ಮೊಬೈಲ್ ಮೂಲಕವೇ ಫೇಸ್‌ಬುಕ್ ಬಳಸುವವರ ಸಂಖ್ಯೆ ಜೂನ್ ಅಂತ್ಯಕ್ಕೆ 620 ಲಕ್ಷಕ್ಕೆ ಏರಿಕೆ ಕಂಡಿದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.ಸದ್ಯ ಭಾರತದಲ್ಲಿ 820 ಲಕ್ಷ   ಮಾಸಿಕ ಸರಾಸರಿ ಕ್ರಿಯಾಶೀಲ (ಎಂಎಯು) ಫೇಸ್‌ಬುಕ್ ಬಳಕೆದಾರರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಶೇ 5ರಷ್ಟು ಹೆಚ್ಚಿದೆ ಎನ್ನುತ್ತಾರೆ ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ಕೆವಿನ್ ಡಿಸೋಜಾ.ಜಾಗತಿಕ ಮಟ್ಟದಲ್ಲಿ ಫೇಸ್‌ಬುಕ್‌ನ ಮಾಸಿಕ ಸರಾಸರಿ ಕ್ರಿಯಾಶೀಲ ಬಳಕೆದಾರರ ಸಂಖ್ಯೆ ಶೇ 51ರಷ್ಟು ಹೆಚ್ಚಿದ್ದು 81,900 ಕೋಟಿಗೆ ಏರಿಕೆ ಕಂಡಿದೆ. ಕಳೆದ ವರ್ಷದ ಜೂನ್‌ನಲ್ಲಿ  ಇದು 54,300 ಕೋಟಿಯಷ್ಟಿತ್ತು.2013ನೇ ಸಾಲಿನ ಎರಡನೆಯ ತ್ರೈಮಾಸಿಕದಲ್ಲಿ ಮೊಬೈಲ್ ಮೂಲಕ ಫೇಸ್‌ಬುಕ್ ಬಳಸುವ ಗ್ರಾಹಕರ ಸಂಖ್ಯೆಯು ಭಾರತ, ಇಂಡೋನೇಷ್ಯಾ, ಬ್ರೆಜಿಲ್‌ನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಲಭಿಸುತ್ತಿರುವುದು ಇದಕ್ಕೆ  ಪ್ರಮುಖ ಕಾರಣ ಎನ್ನುತ್ತಾರೆ ಡಿಸೋಜಾ.ಚೀನಾ ಹೊರತುಪಡಿಸಿದರೆ ಪ್ರಪಂಚದಲ್ಲಿಯೇ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ದೇಶ ಭಾರತ. ಗ್ರಾಹಕರ ಆಧಾರದಲ್ಲಿ ವಿಶ್ವದ ಮೂರನೇಯ ಅತಿ ದೊಡ್ಡ ದೂರಸಂಪರ್ಕ ಜಾಲ ವ್ಯವಸ್ಥೆಯನ್ನೂ ದೇಶ ಹೊಂದಿದೆ. ಭಾರತದ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆ ವಾರ್ಷಿಕ ಶೇ 16ರಷ್ಟು ಪ್ರಗತಿ ಕಂಡಿದೆ. 2012ನೇ ಸಾಲಿನಲ್ಲಿ ಒಟ್ಟು 2,180 ಕೋಟಿ ಹ್ಯಾಂಡ್‌ಸೆಟ್‌ಗಳು ಮಾರಾಟವಾಗಿವೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ 163 ಲಕ್ಷದಷ್ಟಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ `ಐಡಿಸಿ' ಹೇಳಿದೆ.ಬೆಳೆಯುತ್ತಿರುವ ಮೊಬೈಲ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು `ಫೇಸ್‌ಬುಕ್' `ಮೊಬೈಲ್  ಫಸ್ಟ್-ಮೊಬೈಲ್ ಬೆಸ್ಟ್' ಅಭಿಯಾನ ಪ್ರಾರಂಭಿಸಿದೆ. ಇದಕ್ಕಾಗಿ `ಫೇಸ್‌ಬುಕ್ ಫಾರ್ ಎವರಿ ಫೋನ್' ಎಂಬ ಅಪ್ಲಿಕೇಷನ್ ಕೂಡ ಅಭಿವೃದ್ಧಿಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry