ಫೇಸ್‌ಬುಕ್: ಮೊಬೈಲ್ ಮಾರುಕಟ್ಟೆಯತ್ತ ಚಿತ್ತ

7

ಫೇಸ್‌ಬುಕ್: ಮೊಬೈಲ್ ಮಾರುಕಟ್ಟೆಯತ್ತ ಚಿತ್ತ

Published:
Updated:
ಫೇಸ್‌ಬುಕ್: ಮೊಬೈಲ್ ಮಾರುಕಟ್ಟೆಯತ್ತ ಚಿತ್ತ

ಸದ್ಯ ಇಡೀ ವಿಶ್ವವೇ ಮೊಬೈಲ್ ಕಂಪ್ಯೂಟಿಂಗ್ ಶಕೆಯತ್ತ ಹೊರಳುತ್ತಿದೆ.  ಅದರಲ್ಲೂ ಬ್ರೆಜಿಲ್, ಟರ್ಕಿ, ಚಿಲಿ, ವೆನಿಜುವೆಲಾ ದೇಶಗಳಲ್ಲಿ ಮೊಬೈಲ್ ಮೂಲಕ ಇಂಟರ್‌ನೆಟ್ ಬಳಸುತ್ತಿರುವವರ ಸಂಖ್ಯೆ, ಕಂಪ್ಯೂಟರ್ ಮೂಲಕ ಇಂಟರ್‌ನೆಟ್ ಬಳಸುತ್ತಿರುವವರ ಸಂಖ್ಯೆಗೆ ಸಮನಾಗಿ ಬೆಳೆಯುತ್ತಿದೆ. ಭಾರತವೂ ಸೇರಿದಂತೆ ಏಷ್ಯಾದ ಇತರೆ ದೇಶಗಳಲ್ಲೂ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ದ್ವಿಗುಣ ವೇಗದಲ್ಲಿ ಏರುತ್ತಿದೆ. ಹೀಗೆ ಹೊಸತೊಂದು ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿದೆ. ಇತ್ತ ಫೇಸ್‌ಬುಕ್‌ನಂತ ಸಾಮಾಜಿಕ ಸಂವಹನ ತಾಣಗಳಿಗೆ ಹೊಸ ಸವಾಲು ಎದುರಾಗಿದೆ. ಹೊಸ ಮಾಧ್ಯಮಕ್ಕೆ ತಕ್ಕ ಹಾಗೆ ತಮ್ಮ ಮಾರುಕಟ್ಟೆ ವಿಸ್ತರಿಸುವುದು, ವರಮಾನ ಮೂಲಗಳನ್ನು ಹುಡುಕುವುದು ಮತ್ತು ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸುವತ್ತ ಕಂಪೆನಿಗಳು ಗಮನ ಹರಿಸುತ್ತಿವೆ.ಸದ್ಯ ಫೇಸ್‌ಬುಕ್ 85 ಕೋಟಿ ಬಳಕೆದಾರರಲ್ಲಿ ಅರ್ಧದಷ್ಟು ಮಂದಿ ಮೊಬೈಲ್ ಮೂಲಕವೇ ಈ ತಾಣಕ್ಕೆ ಲಾಗಿನ್ ಆಗುತ್ತಿದ್ದಾರೆ ಎಂದು ಕಂಪೆನಿಅಂಕಿ ಅಂಶಗಳೇ ಹೇಳುತ್ತವೆ. ಈ ಬೆಳವಣಿಗೆಯು ಕಂಪೆನಿಗೆ ಹೊಸ ಮಾರುಕಟ್ಟೆ ಸೃಷ್ಟಿಸಿದ ಹಾಗೆಯೇ, ಹೊಸ ಸವಾಲುಗಳನ್ನು ಎದುರಿಗಿಟ್ಟಿದೆ. ಮೊಬೈಲ್ ಜಾಹೀರಾತು ಬಳಸಿ ನೇರವಾಗಿ ವರಮಾನ ಗಳಿಸುವ ಮಾರ್ಗವನ್ನು ಫೇಸ್‌ಬುಕ್ ಇನ್ನೂ ಕಂಡುಕೊಂಡಿಲ್ಲ ಎನ್ನುತ್ತಾರೆ ಆನ್‌ಲೈನ್ ಮಾರುಕಟ್ಟೆ ತಜ್ಞರು.ಗಣಕಯಂತ್ರಗಳಿಗೆ ಹೋಲಿಸಿದರೆ ಇತ್ತೀಚೆಗೆ ಸ್ಮಾರ್ಟ್‌ಫೋನ್ ಸೇರಿದಂತೆ ಚಿಕ್ಕ ದೃಶ್ಯ ಪರದೆಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತದೆ ಕೆನಡಾ ಮೂಲದ ಸಂಶೋಧನಾ ಸಂಸ್ಥೆಯೊಂದು. ಅದರಲ್ಲೂ ಫೇಸ್‌ಬುಕ್, ಟ್ವಿಟರ್‌ನಂತ ತಾಣಗಳ ಬಳಕೆ ಜನಪ್ರಿಯವಾದ ನಂತರ ಸ್ಮಾರ್ಟ್‌ಫೋನ್‌ಗಳ ಮಾರಾಟವೂ ಹೆಚ್ಚಿದೆ. 2011ರಲ್ಲಿ ಪರ್ಸನಲ್ ಕಂಪ್ಯೂಟರ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ ಎನ್ನುತ್ತದೆ ಈ ಸಮೀಕ್ಷೆ.`ಫೇಸ್‌ಬುಕ್ ಇನ್ನೂ ಮೊಬೈಲ್ ಜಾಹೀರಾತು ತಂತ್ರ ಕಂಡುಕೊಂಡಿಲ್ಲ. ಹೀಗಾಗಿ ಮೊಬೈಲ್ ಮೂಲಕ ಸಾಮಾಜಿಕ ತಾಣಗಳ ಬಳಕೆ ಹೆಚ್ಚುತ್ತಿದ್ದರೂ, ವರಮಾನ ಗಳಿಸಿಕೊಳ್ಳಲು ಕಂಪೆನಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಾಮಾಜಿಕ ತಾಣಗಳಿಗೆ ತಂತ್ರಜ್ಞಾನ ಬಳಕೆ ಕುರಿತು ಸಲಹೆ ನೀಡುವ ಅಲ್ಟಿಮೀಟರ್ ಸಮೂಹದ ಸಲಹೆಗಾರ್ತಿ ಸೂಸನ್. `ಸದ್ಯ ಫೇಸ್‌ಬುಕ್‌ನ ಮಾಸಿಕ ಕ್ರಿಯಾಶೀಲ ಬಳಕೆದಾರರ ಪಟ್ಟಿಯಲ್ಲಿ ಮೊಬೈಲ್ ಮೂಲಕ ಲಾಗಿನ್ ಆಗುವರ ಸಂಖ್ಯೆಯೇ ಹೆಚ್ಚಿದೆ. ಆದರೆ, ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರ ತಂಡ ಮೊಬೈಲ್ ವೇದಿಕೆಯನ್ನು ಬಳಸಿಕೊಂಡು  ಲಾಭ ಮಾಡಿಕೊಳ್ಳುವ ತಂತ್ರ ಕಂಡುಕೊಂಡಿಲ್ಲ. ಇದು ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಪ್ರಮುಖ ವರಮಾನ ಮೂಲವೊಂದು ಕೈಬಿಟ್ಟುಹೋಗಬಹುದು ಮತ್ತು ಇದು ಕಂಪೆನಿಯ ಒಟ್ಟಾರೆ ಲಾಭ ಗಳಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ ಸೂಸನ್.  ಸದ್ಯ ಫೇಸ್‌ಬುಕ್‌ಗೆ ಪ್ರಮುಖ ವರಮಾನ ಜಾಹೀರಾತಿನಿಂದ ಬರುತ್ತಿದೆ.  ದೊಡ್ಡ ಪ್ರಮಾಣದ ಜನಸಮುದಾಯವನ್ನು ಏಕಕಾಲದಲ್ಲಿ ತಲುಪಲು ಆಸಕ್ತಿ ಹೊಂದಿರುವ ಕಂಪೆನಿಗಳಿಗೆ, ಉತ್ಪನ್ನಗಳಿಗೆ ತನ್ನ ತಾಣದಲ್ಲಿ ಜಾಹೀರಾತು ಪ್ರಕಟಿಸಲು ಕಂಪೆನಿ ಅವಕಾಶ ನೀಡುತ್ತದೆ.ಅಮೆರಿಕ ಒಂದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿ ಪ್ರಸಕ್ತ ವರ್ಷ ಮೊಬೈಲ್ ಜಾಹೀರಾತಿನ ವರಮಾನ 2.6 ಶತಕೋಟಿ ಡಾಲರ್ (ರೂ 13 ಲಕ್ಷ ಕೋಟಿ) ದಾಟುವ ನಿರೀಕ್ಷೆ ಇದೆ. 2011ರಲ್ಲಿ ಇದು ಕೇವಲ 1.45 ಶತಕೋಟಿ ಡಾಲರ್‌ಗಳಷ್ಟಿತ್ತು ಎನ್ನುತ್ತದೆ `ಇ-ಮಾರ್ಕೆಟರ್~ ಎನ್ನುವ ಸಲಹಾ ಸಂಸ್ಥೆ ನಡೆಸಿದ ಸಮೀಕ್ಷೆ. ಆದರೆ, ಅಲ್ಲಿನ ಆನ್‌ಲೈನ್ ಜಾಹೀರಾತು ಮಾರುಕಟ್ಟೆಗೆ ಹೋಲಿಸಿದರೆ (ಅಂದಾಜು 40 ಶತಕೋಟಿ ಡಾಲರ್)  ಮೊಬೈಲ್ ಜಾಹೀರಾತು ಮಾರುಕಟ್ಟೆ ಚಿಕ್ಕದೊಂದು ಬೆಳ್ಳಿರೇಖೆ ಮಾತ್ರ.  ಮೊಬೈಲ್ ಮೂಲಕ ಇಂಟರ್‌ನೆಟ್ ಬಳಸುವರ ಸಂಖ್ಯೆ ಆನ್‌ಲೈನ್ ಬಳಕೆದಾರರ ಸಂಖ್ಯೆಯನ್ನು ಮೀರಿಸುವ ಸಾಧ್ಯತೆ ಇರುವುದರಿಂದ  ಈಗಿನ್ನೂ ಶೈಶವಾವಸ್ಥೆಯಲ್ಲಿರುವ ಈ ಮಾರುಕಟ್ಟೆ ಮುಂದೊಂದು ದಿನ ತ್ರಿವಿಕ್ರಮಾಕಾರವಾಗಿ ಬೆಳೆಯಬಹುದು ಎನ್ನುತ್ತದೆ `ಇ-ಮಾರ್ಕೆಟರ್~.ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ಫೇಸ್‌ಬುಕ್‌ನ  ನೇರ ಪ್ರತಿಸ್ಪರ್ಧಿ ಗೂಗಲ್ ಕಳೆದ ವರ್ಷ ಮೊಬೈಲ್ ಜಾಹೀರಾತಿನ ಮೂಲಕ 750 ದಶಲಕ್ಷ ಡಾಲರ್ (್ಙ37.5 ಲಕ್ಷ ಕೋಟಿ) ವರಮಾನ ಗಳಿಸಿದೆ. 90 ದಶಲಕ್ಷ ಡಾಲರ್ (್ಙ4.5 ಲಕ್ಷ ಕೊಟಿ)  ಲಾಭ ಗಳಿಸಿರುವ ಆ್ಯಪಲ್ ಕಂಪೆನಿ ಎರಡನೆಯ ಸ್ಥಾನದಲ್ಲಿದೆ. ಇವುಗಳಿಗೆ ಹೋಲಿಸಿದರೆ ಫೇಸ್‌ಬುಕ್ ತುಂಬಾ ಹಿಂದಿದೆ.ವಿದ್ಯುನ್ಮಾನ, ಮುದ್ರಣ ಮತ್ತು ಆನ್‌ಲೈನ್ ಮಾರುಕಟ್ಟೆಗಳಿಗೆ  ಹೋಲಿಸಿದರೆ ಮೊಬೈಲ್ ವೇದಿಕೆ ಇನ್ನೂ ಪಕ್ವಗೊಂಡಿಲ್ಲ ಎಂದು `ಇ-ಮಾರ್ಕೆಟರ್~ ಕಂಪೆನಿಯ ಪ್ರಧಾನ ವಿಶ್ಲೇಷಕ ನೋಹಾ ಎಲ್ಕಿನ್ ಹೇಳುತ್ತಾರೆ.ಆನ್‌ಲೈನ್ ಮಾರುಕಟ್ಟೆಗಿಂತಲೂ ಮೊಬೈಲ್ ಮಾರುಕಟ್ಟೆಯ ವೇಗ  ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ಇದು ದ್ವಿಗುಣ ವೇಗ ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ಅವರು.`ಮೊಬೈಲ್ ಮೂಲಕ ಸಾಮಾಜಿಕ ಸಂವಹನ ತಾಣ ಬಳಸುತ್ತಿರುವವರು ಹೆಚ್ಚು ವೇಗವಾಗಿ ಅಪ್‌ಡೇಟ್‌ಗಳನ್ನು ಮಾಡಲು ಇಷ್ಟಪಡುತ್ತಾರೆ. ಸದ್ಯ ಗಣಕಯಂತ್ರದ ಮೂಲಕ ಫೇಸ್‌ಬುಕ್ ಬಳಸುವವರು ಜಾಹೀರಾತು ತಪ್ಪಿಸಲು ಸುಮಾರು ಎಂಟು ಬಾರಿ ಮೌಸ್ ಕ್ಲಿಕ್ ಮಾಡಬೇಕಾಗುತ್ತದೆ. ಮೊಬೈಲ್‌ನಲ್ಲಿ ಇಷ್ಟೊಂದು ತಡೆಗಳಿದ್ದರೆ ಬಳಕೆದಾರರಿಗೆ ಕಿರಿ ಕಿರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ, ಫೇಸ್‌ಬುಕ್‌ನಂತ ಸಂಸ್ಥೆಗಳು ಮೊಬೈಲ್ ಸ್ನೇಹಿ ಜಾಹೀರಾತನ್ನು ಅಭಿವೃದ್ಧಿ ಪಡಿಸುವ ಅನಿವಾರ್ಯತೆ ಇದೆ~ ಎನ್ನುತ್ತಾರೆ ನೋಹಾ.ಕಳೆದ 15 ವರ್ಷಗಳಿಂದ ಜನರು ಆನ್‌ಲೈನ್‌ನಲ್ಲಿ ಜಾಹೀರಾತು ನೋಡುತ್ತಿದ್ದಾರೆ. ಗಣಕಯಂತ್ರದಲ್ಲಿ ವೆಬ್ ಪುಟ ತೆರೆಯುತ್ತಿದ್ದಂತೆ ಮೂಡುವ ಈ ಜಾಹೀರಾತ ಕಲ್ಪನೆ ಬಳಕೆದಾರರನ ಪಾಲಿಗೆ ಹೊಸತೇನಲ್ಲ. ಆದರೆ, ಸ್ಮಾರ್ಟ್‌ಫೋನ್‌ಗಳಿಗಿಂತಲೂ ಚಿಕ್ಕ ಪರೆದೆ ಹೊಂದಿರುವ ಮೊಬೈಲ್‌ಗಳಲ್ಲಿ ಜಾಹೀರಾತು ಪ್ರಕಟಿಸುವುದು ಅಷ್ಟು ಸುಲಭವಲ್ಲ. ಮೊಬೈಲ್ ಜಾಹೀರಾತು ಎನ್ನುವ ಕಲ್ಪನೆಯೇ ಇತ್ತೀಚೆಗೆ ರೂಪಗೊಂಡಿರುವಂತದ್ದು. ಬಳಕೆದಾರ ಯಾವ ರೀತಿಯ ಜಾಹೀರಾತುಗಳನ್ನು ಮೊಬೈಲ್‌ನಲ್ಲಿ ನೋಡಲು ಇಷ್ಟಪಡುತ್ತಾರೆ, ಅವು ಹೇಗಿರಬೇಕು, ಎಷ್ಟು ಸಮಯ ಇರಬೇಕು, ಅದಕ್ಕೆ ತಕ್ಕಂತೆ ಅಪ್ಲಿಕೇಷನ್ಸ್‌ಗಳು ಯಾವುದಿರಬೇಕು ಇತ್ಯಾದಿ ಹತ್ತು ಹಲವು ಸಂಗತಿಗಳ ಕುರಿತು ಹೊಸ ಅಧ್ಯಯನಗಳು ನಡೆಯಬೇಕಿದೆ ಎನ್ನುತ್ತಾರೆ ಅವರು.ಮೊಬೈಲ್ ಮೂಲಕ ಕಂಪೆನಿಗೂ, ಬಳಕೆದಾರ ಇಬ್ಬರಿಗೂ ಲಾಭ ತರುವಂತ ಜಾಹೀರಾತುಗಳನ್ನು ಪ್ರಕಟಿಸುವುದರ ಕುರಿತು ಫೇಸ್‌ಬುಕ್ ಗಮನ ಹರಿಸುತ್ತಿದೆ ಎನ್ನುತ್ತಾರೆ ಅನೇಕರು. ಉದಾಹರಣಗೆ ಬಳಕೆದಾರ ಇರುವ ನಗರದ ವಿವರಗಳು, ಉತ್ತಮ ಹೋಟೆಲ್, ಚಿತ್ರಮಂದಿರ, ಬಸ್ಸು, ರೈಲು ಸಮಯ ಪಟ್ಟಿ ಇತ್ಯಾದಿ ಕ್ಷೇತ್ರಾಧಾರಿತ ಮಾಹಿತಿ ಮೂಲಕ ಮೊಬೈಲ್ ಜಾಹೀರಾತು ಮಾರುಕಟ್ಟೆ ವಿಸ್ತರಿಸುವುದು ಕಂಪೆನಿಯ ಯೋಜನೆ. ತನಗೂ ಈ ಮಾಹಿತಿಗಳಿಂದ ಲಾಭ ಇರುವುದರಿಂದ ಬಳಕೆದಾರ ಅವುಗಳ ಬಳಕೆಗೆ ನಿರ್ಬಂಧ ವಿಧಿಸುವುದಿಲ್ಲ. ನಂತರದ ಹಂತದಲ್ಲಿ ಚಿಕ್ಕ ಚಿಕ್ಕ ಸ್ಥಳೀಯ ವಾಣಿಜ್ಯ ಜಾಹೀರಾತನ್ನು ಆಕರ್ಷಿಸಬಹುದು ಎನ್ನುವ ಲೆಕ್ಕಾಚಾರ ಕಂಪೆನಿಯದು.ಜಾಹೀರಾತನ್ನು ಹೊರತುಪಡಿಸಿದರೆ ಫೇಸ್‌ಬುಕ್‌ಗೆ ಹೆಚ್ಚಿನ ಲಾಭ ಬರುವುದು `ಜಿಂಗಾ~ನಂತಹ  (ಘಢ್ಞಜ) ಪಾಲುದಾರ ಕಂಪೆನಿಗಳಿಂದ. ಈ ಕಂಪೆನಿಗಳು ಆನ್‌ಲೈನ್ ಗೇಮ್ಸಗಳಿಗೆ ಸಂಬಂಧಿಸಿದ ಅಪ್ಲಿಕೇಷನ್ಸ್‌ಗಳನ್ನು `ಫೇಸ್‌ಬುಕ್ ಪಾವತಿ~ ವ್ಯವಸ್ಥೆಯ ಮೂಲಕ ಮಾರಾಟ ಮಾಡುತ್ತವೆ. ಕಳೆದ ವರ್ಷ ಈ ಪಾಲುದಾರ ಕಂಪೆನಿಯ ಮೂಲಕ ಫೇಸ್‌ಬುಕ್‌ಗೆ ಶೇ 12ರಷ್ಟು ವರಮಾನ ಬಂದಿದೆ.ಐಫೋನ್ ಮತ್ತು ಐಪಾಡ್ ಮೂಲಕ ಫೇಸ್‌ಬುಕ್ ಬಳಸುವರಿಂದ ಕಂಪೆನಿಗೆ ಹೆಚ್ಚಿನ ಲಾಭವಿಲ್ಲ. ಈ ಉಪಕರಣಗಳ ಮೂಲಕ ಅಪ್ಲಿಕೇಷನ್ಸ್ ಮಾರಾಟಕ್ಕೆ ಕಂಪೆನಿ ಮುಂದಾದರೆ ಶೇ 30ರಷ್ಟು ಲಾಭಾಂಶವನ್ನು ಆ್ಯಪಲ್‌ಗೆ ಕೊಡಬೇಕಾಗುತ್ತದೆ. ಗೂಗಲ್ ಕಂಪೆನಿ ಕೂಡ ತನ್ನ `ಆಂಡ್ರಾಯ್ಡ~ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ `ಜಿಂಗಾ~ ಬಳಕೆಗೆ ನಿರ್ಬಂಧ ಹೇರಿದೆ. ಈ ಎಲ್ಲಾ ಸವಾಲುಗಳ ನಡುವೆಯೇ ಫೇಸ್‌ಬುಕ್ ತನ್ನ ಮೊಬೈಲ್ ಮಾರುಕಟ್ಟೆ ವಿಸ್ತರಿಸಬೇಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry