ಫೈನಲ್ಗೆ ಅರ್ಹತೆ ಪಡೆಯಲು ಸುಧಾ ವಿಫಲ

ಲಂಡನ್: ಭಾರತದ ಸುಧಾ ಸಿಂಗ್ ಮಹಿಳೆಯರ 3000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಶನಿವಾರ ನಡೆದ ಹೀಟ್ಸ್ನಲ್ಲಿ ಸುಧಾ 9:48.86 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ತಮ್ಮ ವೈಯಕ್ತಿಕ ಶ್ರೇಷ್ಠ ಸಮಯ (9:47.70) ಕಂಡುಕೊಳ್ಳಲೂ ಅವರಿಗೆ ಸಾಧ್ಯವಾಗಲಿಲ್ಲ.
ಮೊದಲ ಹೀಟ್ಸ್ನಲ್ಲಿ ಪಾಲ್ಗೊಂಡ 15 ಸ್ಪರ್ಧಿಗಳಲ್ಲಿ ಸುಧಾ 13ನೇ ಸ್ಥಾನ ಪಡೆದರು. ಮೊದಲ ಹೀಟ್ಸ್ನಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನು ಪಡೆದ ಸ್ಪರ್ಧಿಗಳು ಫೈನಲ್ಗೆ ಅರ್ಹತೆ ಪಡೆದರು. ಜರ್ಮನಿಯ ಜೆಸಾ ಫೆಲಿಸಿಟಾಸ್ ಕ್ರೂಸ್ 9:24.91 ಸೆಕೆಂಡ್ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.