ಶನಿವಾರ, ಜನವರಿ 25, 2020
27 °C

ಫೈನಲ್‌ಗೆ ಎಸ್‌ಎಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ  ಫುಟ್‌ಬಾಲ್‌ ಸಂಸ್ಥೆ ಆಶ್ರಯದ ಪ್ರಸನ್ನ ಕುಮಾರ ಸ್ಮಾರಕ ಫುಟ್‌ಬಾಲ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದರು.ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂ ಗಣದಲ್ಲಿ ಸೋಮವಾರ ನಡೆದ ಪಂದ್ಯ ದಲ್ಲಿ ಎಸ್‌ಎಐ 2–0 ಗೋಲುಗಳಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡ ವನ್ನು ಪರಾಭವಗೊಳಿಸಿತು. ವಿಜಯೀ ತಂಡದ ಗೌತಮ್‌ (72ನೇ ನಿಮಿಷ) ಹಾಗೂ ಸರೋಜ್‌ ರೈ (79ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಮತ್ತೊಂದು ಪಂದ್ಯದಲ್ಲಿ ಸ್ಟೂಡೆಂಟ್‌ ಯೂನಿಯನ್‌ 4–2 ಗೋಲುಗಳಿಂದ ಎಲ್‌ಆರ್‌ಡಿಇ ಎದುರು ಜಯ ಗಳಿಸಿತು. ಯೂನಿಯನ್‌ ತಂಡದ ಆ್ಯಂಟೊ ಕ್ಸೇವಿಯರ್‌ (3ನೇ, 16ನೇ, 62ನೇ ನಿ.) ಹಾಗೂ ಎಂ.ಆರ್‌.ಸತೀಶ್‌ (14ನೇ ನಿ.) ಗೋಲು ಗಳಿಸಿದರು. ಎಲ್‌ಆರ್‌ಡಿಇ ತಂಡದ ಮೂರ್ತಿ (60ನೇ ನಿ.) ಹಾಗೂ ಸರವಣ ಲೋಕೇಶ್‌ (79ನೇ ನಿ.) ಗೋಲು ತಂದಿತ್ತರು.ಎಸ್‌ಎಐ ಡಿಸೆಂಬರ್‌ ಎಂಟರಂದು ನಡೆಯಲಿರುವ ಫೈನಲ್‌ನಲ್ಲಿ ಡಿವೈಇಎಸ್‌ ತಂಡವನ್ನು ಎದುರಿಲಿದೆ. ಅದೇ ದಿನ ಸಿ.ಪುಟ್ಟಯ್ಯ ಸ್ಮಾರಕ ಟೂರ್ನಿಯ ಫೈನಲ್‌ ಪಂದ್ಯ ನಡೆಯ ಲಿದ್ದು ಎಚ್‌ಎಎಲ್‌ ಹಾಗೂ ಎಂಇಜಿ ಮುಖಾಮುಖಿಯಾಗಲಿವೆ.

ಪ್ರತಿಕ್ರಿಯಿಸಿ (+)