ಶನಿವಾರ, ನವೆಂಬರ್ 16, 2019
24 °C

ಫೈನಲ್‌ಗೆ ಪ್ರಜ್ವಲ್

Published:
Updated:

ಬೆಂಗಳೂರು: ಎಸ್.ಡಿ. ಪ್ರಜ್ವಲ್‌ದೇವ್ ಸೆಂಚುರಿ ಕ್ಲಬ್‌ನಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ 18 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ 6-3, 6-2ರಲ್ಲಿ ಅಲೆನ್ ಜಾನ್ಸನ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಆದಿತ್ಯ ಗೋಖಲೆ 6-4, 6-2ರಲ್ಲಿ ಆರ್.ಎಸ್. ಮೋಹಿತ್ ಅವರನ್ನು ಸೋಲಿಸಿ ಫೈನಲ್ ಘಟ್ಟ ತಲುಪಿದರು. 16 ವರ್ಷದೊಳಗಿನವರ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬಿ. ಉದಯನ್ 7-5, 7-5ರಲ್ಲಿ ಎಸ್. ಗೋಕುಲ್ ಮೇಲೂ, ಟಿ. ಕಪಾಡಿಯಾ 6-1, 7-5ರಲ್ಲಿ ಪಿ.ಸಿ. ಅನಿರುದ್ಧ್ ವಿರುದ್ಧವೂ ಜಯ ಸಾಧಿಸಿದರು.18 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಎನ್. ಶರಣ್ಯಾ 4-6, 6-2, 6-2ರಲ್ಲಿ ಮಧುಮಿತಾ ಮೀನಾಕ್ಷಿ ಮೇಲೂ, ಹರ್ಷಾ ಸಾಯಿ ಚಲ್ಲಾ 3-6, 6-4, 6-1ರಲ್ಲಿ ನಿಖಿತಾ ಪಿಂಟೊ ವಿರುದ್ಧವೂ ಜಯ ಪಡೆದು ಫೈನಲ್ ತಲುಪಿದರು.16 ವರ್ಷದೊಳಗಿನವರ ವಿಭಾಗದಲ್ಲೂ ಶರಣ್ಯಾ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಈ ಆಟಗಾರ್ತಿ 6-2, 6-0ರಲ್ಲಿ ಅದಿತಿ ಭಾಸ್ಕರ್ ಮೇಲೂ ಗೆದ್ದರು.

ಪ್ರತಿಕ್ರಿಯಿಸಿ (+)