ಫೈನಲ್‌ಗೆ ಪ್ರಜ್ವಲ್‌ದೇವ್, ಸೋಹಾ

7

ಫೈನಲ್‌ಗೆ ಪ್ರಜ್ವಲ್‌ದೇವ್, ಸೋಹಾ

Published:
Updated:

ಮೈಸೂರು: ಅಗ್ರಶ್ರೇಯಾಂಕದ ಆಟಗಾರರಾದ ಕರ್ನಾಟಕದ ಎಸ್.ಡಿ. ಪ್ರಜ್ವಲ್‌ದೇವ್ ಮತ್ತು ಎಸ್. ಸೋಹಾ ಮೈಸೂರು ಟೆನಿಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ `ಎಂಟಿಸಿ ಕಪ್' ಎಐಟಿಎ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದೊಳಗಿನ ಬಾಲಕ ಮತ್ತು 16 ವರ್ಷದೊಳಗಿನ ಬಾಲಕಿಯರ ವಿಭಾಗದ ಫೈನಲ್‌ಗೆ ಪ್ರವೇಶಿಸಿದ್ದಾರೆ.ಗುರುವಾರ ನಡೆದ ಬಾಲಕರ ಸೆಮಿಫೈನಲ್‌ನಲ್ಲಿ ಪ್ರಜ್ವಲ್‌ದೇವ್ 6-1, 7-6 (1) ರಿಂದ ಮೈಸೂರಿನವರೇ ಆದ ವಸಿಷ್ಠ ವಿನೋದ ಚೆರುಕು ಅವರನ್ನು ಪರಾಭವಗೊಳಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡಿನ ಗಣೇಶ್ ಶ್ರೀನಿವಾಸನ್ 6-3, 6-3ರಿಂದ ತಮ್ಮ ರಾಜ್ಯದ ಪ್ರನಾಶ್ ಬಾಬು ವಿರುದ್ಧ ಜಯ ಗಳಿಸಿದರು.ಇದೇ ವಯೋಮಿತಿಯ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶದ ಹರ್ಷಾ ಸಾಯಿ ಚಲ್ಲಾ 6-4, 6-4ರಿಂದ ಕರ್ನಾಟಕದ ದೀಪಾ ದೊರೆ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ  ಅಭಿಲಾಷಾ ವಿಶ್ವಾಸ್ 6-4, 6-3ರಿಂದ ಶಿಖಾ ಎನ್. ಸಿಂಗ್ ವಿರುದ್ಧ ಜಯಗಳಿಸಿದರು.ಫೈನಲ್‌ಗೆ ಸೋಹಾ: 16 ವರ್ಷದೊಳಗಿನ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕದ ಎಸ್. ಸೋಹಾ 7-5, 6-0ಯಿಂದ ಎಂ. ಜ್ಯೋತಿ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶಿಸಿದರು. ಇದೇ ವಿಭಾಗದ ಇನ್ನೊಂದು ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶದ ಹರ್ಷಾ ಸಾಯಿ 6-4, 6-4ರಿಂದ ಕರ್ನಾಟಕದ ನಿಖಿತಾ ಪಿಂಟೋ ವಿರುದ್ಧ ಜಯಿಸಿದರು. ಹರ್ಷಾ ಎರಡು ವಯೋಮಿತಿಗಳ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry