ಫೈನಲ್‌ಗೆ ಭಾರತ ತಂಡ

7
ಜೋಹರ್‌ ಕಪ್‌ ಜೂನಿಯರ್‌ ಹಾಕಿ ಟೂರ್ನಿ

ಫೈನಲ್‌ಗೆ ಭಾರತ ತಂಡ

Published:
Updated:
ಫೈನಲ್‌ಗೆ ಭಾರತ ತಂಡ

ಜೋಹರ್‌ ಬಹ್ರು, ಮಲೇಷ್ಯಾ (ಪಿಟಿಐ): ಭಾರತ ತಂಡದವರು  ಇಲ್ಲಿ ನಡೆಯುತ್ತಿರುವ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ 21 ವರ್ಷ­ದೊಳಗಿನವರ ಹಾಕಿ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದಾರೆ.ತಮನ್‌ ದಯಾ ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತ 6–1 ಗೋಲು­ಗಳಿಂದ ಕೊರಿಯಾ ತಂಡವನ್ನು ಮಣಿಸಿತು. ಆರು ರಾಷ್ಟ್ರಗಳ ಟೂರ್ನಿ­ಯಲ್ಲಿ ಭಾರತಕ್ಕೆ ಲಭಿಸಿದ ಸತತ ನಾಲ್ಕನೇ ಜಯವಿದು. ಅಗ್ರಸ್ಥಾನ ಪಡೆದಿರುವ ಈ ತಂಡದ ಬಳಿ ಈಗ ಒಟ್ಟು 12 ಪಾಯಿಂಟ್‌ಗಳಿವೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ಎದುರು ಆಡಲಿದೆ.ಶುಕ್ರವಾರ ಟೂರ್ನಿಯ ಕೊನೆಯ ಲೀಗ್‌ ಪಂದ್ಯ ನಡೆಯಲಿದ್ದು, ಭಾರತ ಹಾಗೂ ಮಲೇಷ್ಯಾ ಪೈಪೋಟಿ ನಡೆಸಲಿವೆ. ಉಭಯ ತಂಡಗಳು ಈಗಾಗಲೇ ಫೈನಲ್‌ ಪ್ರವೇಶಿಸಿರುವ ಕಾರಣ ಈ ಪಂದ್ಯಕ್ಕೆ ಮಹತ್ವವಿಲ್ಲ.ವಿಜಯೀ ತಂಡದ ಅಮಿತ್‌ ರೋಹಿದಾಸ್‌ (7ನೇ ನಿಮಿಷ), ಸತ್ಬಿರ್‌ ಸಿಂಗ್‌ (9ನೇ ನಿ.), ತಲ್ವಿಂದರ್‌ ಸಿಂಗ್‌ (31ನೇ ನಿ.) ಅಮೋನ್‌ ಮಿರಾಶ್‌ ಟರ್ಕಿ (57ನೇ ನಿ.), ರಮಣದೀಪ್‌ ಸಿಂಗ್‌ (62ನೇ) ಹಾಗೂ ಉಪನಾಯಕ ಅಫಾನ್‌ ಯೂಸಫ್‌ (65ನೇ ನಿ.) ಗೋಲು ಗಳಿಸಿದರು. ಕೊರಿಯಾ ತಂಡದ ಯೂ ಸಿಯುಂಗ್‌ ಜು (34ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಭಾರತ ವಿರಾಮದ ವೇಳೆಗೆ 3–1 ಗೋಲುಗಳಿಂದ ಮುಂದಿತ್ತು. ‘ಇದೊಂದು ಗಮನಾರ್ಹ ಪ್ರದರ್ಶನ. ಯೋಜನೆ ಹಾಗೂ ತಂತ್ರಗಳನ್ನು ಅಂಗಳದಲ್ಲಿ ಯಶಸ್ವಿಯಾಗಿ ಜಾರಿಗೆ ತರುತ್ತಿದ್ದಾರೆ. ಆದರೆ ಇದು ನನ್ನ ತಲೆನೋವು ಹೆಚ್ಚಿಸಿದೆ. ಏಕೆಂದರೆ ಜೂನಿಯರ್‌ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಈಗ ಆಟಗಾರರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ’ ಎಂದು ಕೋಚ್‌ ಗ್ರೇಗ್‌ ಕ್ಲಾರ್ಕ್‌ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry