ಭಾನುವಾರ, ಜನವರಿ 19, 2020
22 °C

ಫೈನಲ್‌ನಲ್ಲಿ ಕರ್ನಾಟಕದ ಪುರುಷರಿಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಲ್ಲಿ ಭಾನುವಾರ ಸಂಜೆ ಜನತೆಯ ಸಂತಸ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ ಕಿಕ್ಕಿರಿದ ಜನ­ಸಂದಣಿ ತುಂಬಿತ್ತು. ನಗರದ ಜೂನಿಯರ್‌ ಕಾಲೇಜು ಆವರಣ­ದಲ್ಲಿ ಸ್ವಾಮಿ ವಿವೇಕಾನಂದ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ 25ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬಾಲಕ– ಬಾಲಕಿಯರ ಕೊಕ್ಕೊ ಪಂದ್ಯಾವಳಿ ಭಾನುವಾರ ಮುಕ್ತಾಯ­ವಾಯಿತು. ಕರ್ನಾಟಕ ತಂಡ ಸಬ್‌ ಜೂನಿಯರ್‌ ಬಾಲಕ– ಬಾಲಕಿ­ಯರು ಹಾಗೂ ಪುರುಷ– ಮಹಿಳಾ ವಿಭಾಗ ಸೇರಿದಂತೆ 4 ವಿಭಾಗದಲ್ಲಿಯೂ ಫೈನಲ್‌ ತಲು­ಪಿದ್ದ ಕಾರಣ, ಕ್ರೀಡಾಂಗಣದಲ್ಲಿ ಸಂತಸದ ವಾತಾವರಣವಿತ್ತು.ಕರ್ನಾಟಕ ಬಾಲಕಿ, ಬಾಲಕಿಯರು ಬಲಿಷ್ಠ ಮಹಾರಾಷ್ಟ್ರ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಅಂತಿಮ ಹಣಾಹಣಿ ಪ್ರೇಕ್ಷಕರ ಕೂತುಹಲ, ಉತ್ಸಾಹ, ಚಪ್ಪಾಳೆ-­ಯೊಂದಿಗೆ ರೋಚಕವಾಗಿ ನಡೆಯಿತು. ಬಾಲಕರ ವಿಭಾಗದಲ್ಲಿ 5 ನಿಮಿಷ ಆಟವಾಡಿ ಗೆಲುವಿಗೆ ಕಾರಣನಾದ ಬೆಳಗಾವಿಯ ಗಂಗಪ್ಪ ಸರ್ವಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿ, ಭರತ್‌ ಪ್ರಶಸ್ತಿ ಪಡೆದರು. ಆತನನ್ನು ಆಯೋಜಕ ಪ್ರದೀಪ್‌ ಮುಂತಾದವರು ಕ್ರೀಡಾಂಗಣದಲ್ಲಿ ಎತ್ತಿ ಕುಣಿದಾಡಿದರು.ಅಂತಿಮ ಪಂದ್ಯವನ್ನು ವೀಕ್ಷಿಸಲು ಭಾನುವಾರ ಜಿಲ್ಲೆಯಿಂದ ಮಾತ್ರವಲ್ಲದೆ ಹೊರಜಿಲ್ಲೆಯಿಂದಲೂ ಕೊಕ್ಕೊ ಪ್ರೇಮಿಗಳು ಆಗಮಿಸಿದ್ದರು. ಫೈನಲ್‌ ಪ್ರವೇಶಿಸಿದ್ದ ತಮ್ಮ ಮಕ್ಕಳ ಆಟವನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳ ಪೋಷಕರು ಆಗಮಿಸಿದ್ದರು. ಪಂದ್ಯದಲ್ಲಿ ಗೆಲುವು ಸಾಧಿಸಿದ, ಉತ್ತಮ ಪ್ರದರ್ಶನ ನೀಡಿದ ತಮ್ಮ ಮಕ್ಕಳನ್ನು ತಂದೆ– ತಾಯಂದಿರು ಕ್ರೀಡಾಂಗಣದಲ್ಲಿಯೇ ಮುದ್ದಾಡಿದರು.ಮಹಿಳಾ ತಂಡಕ್ಕೆ 2ನೇ ಸ್ಥಾನ

ಕರ್ನಾಟಕ ಮಹಿಳಾ ತಂಡ ಕೇರಳ ವಿರುದ್ಧ 12–7 ಅಂಕಗಳಿಂದ ಸೋತು, 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳು­ವಂತಾಯಿತು. ಕರ್ನಾಟಕ ತಂಡದ ವೀಣಾ ಕುಮಾರಿ 3 ನಿಮಿಷ ಆಟವಾಡಿ, 1 ಔಟ್‌ ಪಡೆದರು. ಕೇರಳದ ದಿವ್ಯಾ 4 ಮತ್ತು 2 ನಿಮಿಷ ಆಟವಾಡಿ ಉತ್ತಮ ಪ್ರದರ್ಶನ ನೀಡಿದರು.

ಪ್ರತಿಕ್ರಿಯಿಸಿ (+)