ಫೈನಲ್‌ನಲ್ಲಿ ಪೇಸ್-ರಾಡೆಕ್‌ಗೆ ಸೋಲು

7

ಫೈನಲ್‌ನಲ್ಲಿ ಪೇಸ್-ರಾಡೆಕ್‌ಗೆ ಸೋಲು

Published:
Updated:
ಫೈನಲ್‌ನಲ್ಲಿ ಪೇಸ್-ರಾಡೆಕ್‌ಗೆ ಸೋಲು

ಟೋಕಿಯೊ (ಪಿಟಿಐ): ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಇಲ್ಲಿ ನಡೆಯುತ್ತಿರುವ ಎಟಿಪಿ ಜಪಾನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.ಭಾನುವಾರ ನಡೆದ ಅಂತಿಮ ಘಟ್ಟದ ಪಂದ್ಯದಲ್ಲಿ ಪೇಸ್-ಸ್ಟೆಪಾನೆಕ್ 3-6, 6-7ರಲ್ಲಿ ಅಲೆಕ್ಸಾಂಡರ್ ಪೇಯಾ ಹಾಗೂ ಬ್ರುನೊ ಸೋರ್ಸ್‌ ಎದುರು ಪರಾಭವಗೊಂಡರು.  ಆದರೂ ಪೇಸ್ ಹಾಗೂ ಸ್ಟೆಪಾನೆಕ್ ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಎಟಿಪಿ ವರ್ಲ್ಡ್ ಟೂರ್  ಫೈನಲ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.ಪೇಸ್ 13ನೇ ಬಾರಿ ಈ ಟೂರ್ನಿಯಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಅವರು 1997, 1999, 2000 ಹಾಗೂ 2005ರಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry