ಫೈನಲ್ ಪ್ರವೇಶಿಸಿದ ಮಹಾರಾಷ್ಟ್ರ ತಂಡ

7
ಕೂಚ್ ಬೆಹಾರಿ ಟ್ರೋಫಿ: ಆತಿಥೇಯರಿಗೆ ನಿರಾಸೆ

ಫೈನಲ್ ಪ್ರವೇಶಿಸಿದ ಮಹಾರಾಷ್ಟ್ರ ತಂಡ

Published:
Updated:
ಫೈನಲ್ ಪ್ರವೇಶಿಸಿದ ಮಹಾರಾಷ್ಟ್ರ ತಂಡ

ಬೆಂಗಳೂರು: ಕರ್ನಾಟಕದ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಮಹಾರಾಷ್ಟ್ರ ತಂಡ ಲೆಕ್ಕಾಚಾರದಂತೆಯೇ 19 ವರ್ಷದೊಳಗಿನವರ ಕೂಚ್ ಬೆಹಾರಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಮಹಾರಾಷ್ಟ್ರ ಬುಧವಾರ ಫೈನಲ್ ಪ್ರವೇಶಿಸಿದ ಸಂಭ್ರಮ ಆಚರಿಸಿಕೊಂಡಿತು.

ಈ ತಂಡ ಮೊದಲ ಇನಿಂಗ್ಸ್‌ನಲ್ಲಿ 203 ರನ್‌ಗಳ ಮುನ್ನಡೆ ಸಾಧಿಸಿದ್ದಾಗಲೇ ಫೈನಲ್ ಪ್ರವೇಶಿಸುವುದು ಖಚಿತವಾಗಿತ್ತು. ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್‌ನಲ್ಲಿ 79.3 ಓವರ್‌ಗಳಲ್ಲಿ 211 ರನ್ ಗಳಿಸುಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಶುಭಮ್ ಎಸ್ ರಂಜಿನಿ (50, 162 ಎಸೆತ, 7ಬೌಂಡರಿ) ಮತ್ತೊಮ್ಮೆ ಜವಾಬ್ದಾರಿಯುತ ಆಟವಾಡಿದರು. ನಿಖಿಲ್ ನಾಯ್ಕ (68, 107ಎಸೆತ, 10 ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿ ತಂಡವನ್ನು 200 ರನ್ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಆತಿಥೇಯರ ಗೆಲುವಿಗೆ ದ್ವಿತೀಯ ಇನಿಂಗ್ಸ್‌ನಲ್ಲಿ 414 ರನ್‌ಗಳ ಗುರಿ ಇತ್ತು. ಆದರೆ, ಕರ್ನಾಟಕ 21 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದ್ದಾಗ ಕೊನೆಯ ದಿನದಾಟಕ್ಕೆ ತೆರೆ ಬಿತ್ತು.ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ ಪ್ರಥಮ ಇನಿಂಗ್ಸ್ 476 ಹಾಗೂ 79.3 ಓವರ್‌ಗಳಲ್ಲಿ 211. (ಶುಭಮ್ ಎಸ್. ರಂಜಿನಿ 50, ನಿಖಿಲ್ ನಾಯ್ಕ 68; ಪ್ರದೀಪ್ ಟಿ. 19ಕ್ಕೆ1, ಪ್ರತೀಕ್ ಜೈನ್ 38ಕ್ಕೆ2, ಜೆ. ಸುಚಿತ್ 61ಕ್ಕೆ4, ಶ್ರೇಯಲ್ ಗೋಪಾಲ್ 55ಕ್ಕೆ1, ). ಕರ್ನಾಟಕ 107 ಓವರ್‌ಗಳಲ್ಲಿ 273 ಮತ್ತು ದ್ವಿತೀಯ ಇನಿಂಗ್ಸ್ 21 ಓವರ್‌ಗಳಲ್ಲಿ 96ಕ್ಕೆ3. (ರೋಹನ್ ಕದಮ್ 33, ಕೆ.ಎನ್. ಭರತ್ ಔಟಾಗದೆ 25). ಫಲಿತಾಂಶ: ಪಂದ್ಯ ಡ್ರಾ. ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಮಹಾರಾಷ್ಟ್ರ ಫೈನಲ್ ಪ್ರವೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry