ಫೈನಲ್ ಪ್ರವೇಶಿಸಿದ ಸಾನಿಯಾ-ನೂರಿಯಾ

7

ಫೈನಲ್ ಪ್ರವೇಶಿಸಿದ ಸಾನಿಯಾ-ನೂರಿಯಾ

Published:
Updated:

ಬೀಜಿಂಗ್ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಅವರ ಜೊತೆಗಾರ್ತಿ ನೂರಿಯಾ ಲಗೊಸ್ತೆರಾ ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ-ನೂರಿಯಾ 7-5, 6-1ರಲ್ಲಿ ಸ್ಲೋವಾಕಿಯಾದ ಕ್ಯಾಥರಿನಾ ಸ್ರೆಬೋಟ್ನಿಕ್ ಹಾಗೂ ಚೀನಾದ ಜೀ ಜೆಂಗ್ ಎದುರು ಗೆದ್ದರು. ಭಾರತ-ಸ್ಪೇನ್ ಜೋಡಿ ಅಂತಿಮ ಘಟ್ಟದಲ್ಲಿ ರಷ್ಯಾದ ಎಕತೆರಿನಾ ಮಕರೋವಾ ಹಾಗೂ ಎಲೆನಾ ವೆಸ್ನಿನಾ ಎದುರು ಆಡಲಿದೆ.ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡರು. ಅವರು 2-6, 6-7ರಲ್ಲಿ ಅರ್ಜೆಂಟೀನಾದ ಕಾರ್ಲೊಸ್ ಬೆರ್ಲಾಕ್ ಹಾಗೂ ಉಜ್ಬೆಕಿಸ್ತಾನದ ಡೆನಿಸ್ ಇಸ್ತೊಮಿನ್ ಪರಾಭವಗೊಂಡರು.ಸೆಮಿಫೈನಲ್‌ಗೆ ಪೇಸ್-ರಾಡೆಕ್: ಟೋಕಿಯೊ (ಪಿಟಿಐ): ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಇಲ್ಲಿ ನಡೆಯುತ್ತಿರುವ ಎಟಿಪಿ ಜಪಾನ್ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೇಸ್-ಸ್ಟೆಪಾನೆಕ್ 6-4, 3-6, 10-2ರಲ್ಲಿ ಬ್ರಿಟನ್‌ನ ಆ್ಯಂಡಿ ಹಾಗೂ ಜೇಮಿ ಮರ‌್ರೆ ಅವರನ್ನು ಪರಾಭವಗೊಳಿಸಿದರು.ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಡೇನಿಯೆಲೆ ಬ್ರಾಸಿಯಾಲಿ ಹಾಗೂ ಫ್ರಾಂಟಿಸೆಕ್ ಸೆರಮಿಕ್ ಎದುರು ಪೈಪೋಟಿ ನಡೆಸಲಿದ್ದಾರೆ. ಭಾರತ-ಚೆಕ್ ಗಣರಾಜ್ಯದ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಿಯಾದ ಫಿಲಿಪ್ ಪೊಲಾಸೆಕ್ ಹಾಗೂ ಆಸ್ಟ್ರಿಯದ ಜೂಲಿಯನ್ ನೋಲ್ಸ್ ಎದುರು ಜಯ ಗಳಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry