ಫೋರ್ಟಿಸ್‌ಗೆ ಜಯ

7

ಫೋರ್ಟಿಸ್‌ಗೆ ಜಯ

Published:
Updated:

ಬೆಂಗಳೂರು: ಫೋರ್ಟಿಸ್ ತಂಡ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿತು.ಅಕ್ಕಿತಿಮ್ಮನಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಫೋರ್ಟಿಸ್ 3-2 ಗೋಲುಗಳಿಂದ ಪಿಎನ್‌ಬಿ ತಂಡವನ್ನು ಸೋಲಿಸಿತು.ವಿಜಯಿ ತಂಡ ವಿರಾಮದ ವೇಳೆಗೆ 3-1 ಗೋಲುಗಳಿಂದ ಮುಂದಿತ್ತು. ಈ ತಂಡದ ಇರ್ಶಾದ್ (2ನೇ ನಿಮಿಷ), ಪ್ರವೀಣ್ (26ನೇ ನಿ.) ಹಾಗೂ ದಲೇರ್ (30ನೇ ನಿ.) ಗೋಲು ಗಳಿಸಿದರು. ಪಿಎನ್‌ಬಿ ತಂಡದ ದಮನ್‌ದೀಪ್ ಸಿಂಗ್ (34ನೇ ನಿ.) ಹಾಗೂ ಬನ್ಮಾಲಿ (42ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಇನ್ನೊಂದು ಪಂದ್ಯದಲ್ಲಿ ಆರ್ಮಿ ರೆಡ್ 7-2 ಗೋಲಗಳಿಂದ ಎಂಇಜಿ `ಎ~ ತಂಡವನ್ನು ಮಣಿಸಿತು. ವಿಜಯಿ ತಂಡದ ಸಂತಿಯಾಲ್ (6ನೇ ಹಾಗೂ 33ನೇ ನಿ.), ಪ್ರಫುಲ್ (18ನೇ ಹಾಗೂ 66ನೇ ನಿ.), ಅರ್ಮುಗಮ್(34ನೇ ನಿ.), ರಾಜೇಶ್ ಕುಮಾರ್ (53ನೇ ನಿ.), ಧನಂಜಯ್ ಮಹಾದಿಕ್ (67ನೇ ನಿ.) ಗೋಲು ಗಳಿಸಿದರು. ಎಂಇಜಿ ತಂಡದ ಕಾರ್ಯಪ್ಪ (26ನೇ ನಿ.) ಹಾಗೂ ರಾಬಿನ್ (29ನೇ ನಿ.) ಗೋಲು ತಂದಿತ್ತರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry