ಭಾನುವಾರ, ಮೇ 16, 2021
26 °C

ಫೋರ್ಟಿಸ್ ದೀದಿಯರಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಗಿಗಳ ಆರೋಗ್ಯ ಪಾಲನೆ ವಿಷಯದಲ್ಲಿ ವೈದ್ಯರಷ್ಟೇ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ ದಾದಿಯರು. ನರ್ಸಿಂಗ್ ಕ್ಷೇತ್ರ ತನ್ನ ವಿಶಿಷ್ಟ ಸೇವಾ ಮನೋಭಾವದಿಂದಾಗಿಯೇ ವಿಶ್ವ ಮನ್ನಣೆ ಪಡೆದುಕೊಂಡಿದೆ. ಅದಕ್ಕಾಗಿಯೇ ಇರಬೇಕು ನರ್ಸ್‌ಗಳನ್ನು ಎಲ್ಲರೂ ಪ್ರೀತಿಯಿಂದ `ಸಿಸ್ಟರ್~ ಎಂದು ಸಂಬೋಧಿಸುತ್ತಾರೆ.ತಮ್ಮ ಮನಸ್ಸಿನೊಳಗೆ ಯಾವುದೇ ಅಸಹ್ಯ ಭಾವನೆಯನ್ನು ಇರಿಸಿಕೊಳ್ಳದೇ ರೋಗಿಗಳ ಸೇವೆಯಲ್ಲಿ ತೊಡಗುವ ದಾದಿಯರ ನಿಸ್ವಾರ್ಥ ಮನೋಭಾವ ತಾಯಿಯ ಪ್ರೀತಿಯನ್ನು ನೆನಪಿಸುತ್ತದೆ.ರೋಗಿಗಳ ಸೇವೆಯಲ್ಲಿ ತೊಡಗಿದ್ದ ಫ್ಲಾರೆನ್ಸ್ ನೈಟಿಂಗೆಲ್, ಮದರ್ ತೆರೆಸಾ ಅವರಂತಹವರು ಇವರಿಗೆ ಮಾದರಿ. ಈ ಮಹನೀಯರು ಹಾಕಿಕೊಟ್ಟ ಸೇವಾ ಪಥದಲ್ಲಿ ಸಾಗುತ್ತಿರುವ ದಾದಿಯರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಫೋರ್ಟಿಸ್ ಆಸ್ಪತ್ರೆ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ನರ್ಸಿಂಗ್ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿದೆ, ಅವರಲ್ಲಿ ಉತ್ಸಾಹ ತುಂಬುತ್ತಿದೆ.ಫೋರ್ಟಿಸ್ `ವಿನ್ ನರ್ಸ್ ಅವಾರ್ಡ್ಸ್ 2011~, ದೇಶದ ವಿವಿಧೆಡೆಯ ಫೋರ್ಟಿಸ್ ಆಸ್ಪತ್ರೆಗಳ ನರ್ಸ್‌ಗಳಿಗೆ ಮೀಸಲು. ಇದಕ್ಕೆ ಅವರ ಸೇವಾ ಮನೋಭಾವವೇ ಪ್ರಮುಖ ಮಾನದಂಡ. ಇವರನ್ನು ಆಯ್ಕೆ ಮಾಡವವರು ಬಾಹ್ಯ ತೀರ್ಪುಗಾರರು.ತಾಂತ್ರಿಕ ಕೌಶಲ್ಯ, ಸೇವೆ ಹಾಗೂ ತಂಡದ ಉತ್ಸಾಹ ಗಮನದಲ್ಲಿ ಇಟ್ಟುಕೊಂಡು ಮೂರು ವರ್ಗದಲ್ಲಿ ಈ ಸಲದ ಶ್ರೇಷ್ಠರನ್ನು ಗುರುತಿಸಿ ಗೌರವಿಸಲಾಯಿತು.ದಾದಿಯರಿಗೆ ಬೆಸ್ಟ್ ನರ್ಸ್, ಬೆಸ್ಟ್ ನರ್ಸ್ ಸೂಪರ್‌ವೈಸರ್ಸ್‌ ನೀಡಲಾಯಿತು. ಜನಪ್ರಿಯತೆ ಆಧರಿಸಿದ ಪ್ರಶಸ್ತಿ ವಿಭಾಗದಲ್ಲಿ `ಫೋರ್ಟಿಸ್ ಹೆಲ್ಪ್‌ಪುಲ್ ಹ್ಯಾಂಡ್ಸ್, `ಫೋರ್ಟಿಸ್ ನೈಟಿಂಗೇಲ್, `ಫೋರ್ಟಿಸ್ ಎ  ಒನ್ ನರ್ಸ್ ಪ್ರಶಸ್ತಿ ಹಾಗೂ ಬೆಸ್ಟ್ ಟೀಂ ಫರ್ಮಾನೆನ್ಸ್~ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಫೋರ್ಟಿಸ್ ಹಾಸ್ಪಿಟಲ್‌ನ ಸಿಒಒ ಲಾಯ್ಡ ನಜರತ್, ಫೋರ್ಟಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶಿವಿಂದರ್ ಸಿಂಗ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.