ಬುಧವಾರ, ನವೆಂಬರ್ 13, 2019
23 °C

ಫೋರ್ಸ್ ಇಂಡಿಯಾಕ್ಕೆ ನಿರಾಸೆ

Published:
Updated:

ಶಾಂಘೈ (ಪಿಟಿಐ): ಫೋರ್ಸ್ ಇಂಡಿಯಾ ತಂಡದ ಚಾಲಕರು ಶಾಂಘೈ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನ ಅರ್ಹತಾ ಹಂತದಲ್ಲಿ ನಿರಾಸೆ ಅನುಭವಿಸಿದ್ದು, ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.ಭಾನುವಾರ ನಡೆಯುವ ರೇಸ್‌ನಲ್ಲಿ ಈ ತಂಡದ ಚಾಲಕರಾದ ಪೌಲ್ ಡಿ ರೆಸ್ಟಾ ಮತ್ತು ಅಡ್ರಿಯಾನ್ ಸುಟಿಲ್ ಕ್ರಮವಾಗಿ 11 ಹಾಗೂ 13ನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಲಿದ್ದಾರೆ.ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರು ಭಾನುವಾರ `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸುವರು. ಬ್ರಿಟನ್‌ನ ಚಾಲಕನಿಗೆ ಪ್ರಸಕ್ತ ಋತುವಿನಲ್ಲಿ ದೊರೆತ ಮೊದಲ `ಪೋಲ್ ಪೊಸಿಷನ್' ಇದಾಗಿದೆ. ಲೋಟಸ್ ತಂಡದ ಕಿಮಿ ರೈಕೊನೆನ್ ಎರಡನೆಯವರಾಗಿ ಸ್ಪರ್ಧೆ ಆರಂಭಿಸಲಿದ್ದಾರೆ.`11ನೇ ಸ್ಥಾನದಲ್ಲಿ ಸ್ಪರ್ಧೆ ಆರಂಭಿಸುತ್ತಿರುವುದು ಕಳಪೆ ಪ್ರದರ್ಶನವೇನೂ ಅಲ್ಲ. ನಾವು ಅರ್ಹತಾ ಹಂತದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದೆವು. ಆದರೂ ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗಿದೆ' ಎಂದು ಫೋರ್ಸ್ ಇಂಡಿಯಾ ತಂಡದ ರೆಸ್ಟಾ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಮಲ್ಯ ಒಡೆತನದ ತಂಡ ಈ ಹಿಂದಿನ ರೇಸ್ `ಮಲೇಷ್ಯನ್ ಗ್ರ್ಯಾನ್ ಪ್ರಿ' ನಲ್ಲಿಯೂ ಪಾಯಿಂಟ್ ಕಲೆಹಾಕುವಲ್ಲಿ ವಿಫಲವಾಗಿತ್ತು.

ಪ್ರತಿಕ್ರಿಯಿಸಿ (+)