ಫೋರ್ಸ್ ಇಂಡಿಯಾ ತಂಡ ಸೇರಿದ ಕೊಲಾಡೊ

7

ಫೋರ್ಸ್ ಇಂಡಿಯಾ ತಂಡ ಸೇರಿದ ಕೊಲಾಡೊ

Published:
Updated:

ಮೊನ್ಜಾ (ಪಿಟಿಐ): ಬ್ರಿಟನ್‌ನ ಜಿಪಿ2 ರೇಸ್ ಚಾಲಕ ಜೇಮ್ಸ ಕೊಲಾಡೊ ಅವರು ಸಹಾರಾ ಫೋರ್ಸ್ ಇಂಡಿಯಾ ತಂಡ ಸೇರಿಕೊಂಡಿದ್ದಾರೆ. ಪ್ರಸಕ್ತ ಫಾರ್ಮುಲಾ ಒನ್ ಋತುವಿನ ಇನ್ನುಳಿದ ಅವಧಿಗೆ ಅವರು ಹೆಚ್ಚುವರಿ ಚಾಲಕರಾಗಿ ಫೋರ್ಸ್ ಇಂಡಿಯಾ ಜೊತೆ ಇರುವರು.ಯುವ ಚಾಲಕರ ಸಾಮರ್ಥ್ಯ ನೋಡಲು ಫೋರ್ಸ್ ಇಂಡಿಯಾ ಜುಲೈ ತಿಂಗಳಲ್ಲಿ  ನಡೆಸಿದ್ದ ಸ್ಪರ್ಧೆಯಲ್ಲಿ ಕೊಲಾಡೊ ಗಮನಾರ್ಹ ಪ್ರದರ್ಶನ ನೀಡಿದ್ದರು. ಈ ಕಾರಣ ತಂಡ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ.`ಜೇಮ್ಸ ಮೂರನೇ ಚಾಲಕನಾಗಿ ನಮ್ಮ ತಂಡವನ್ನು ಸೇರಿಕೊಳ್ಳುತ್ತಿರುವುದು ಸಂತಸದ ವಿಚಾರ' ಎಂದು ಫೋರ್ಸ್ ಇಂಡಿಯಾ ಒಡೆಯ ವಿಜಯ್ ಮಲ್ಯ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry