ಫ್ಯಾಕ್ಸ್ನಲ್ಲಿ ಬಂದ ಪ್ರಶ್ನೆ ಪತ್ರಿಕೆ!

ಹೂವಿನಹಡಗಲಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಗುರುವಾರ ಆರಂಭ ವಾಗಿದ್ದು, ಇಲ್ಲಿನ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಬಾರದೇ ಗೊಂದಲಕ್ಕೆ ಈಡಾದ ಘಟನೆ ನಡೆದಿದೆ.
ಪರೀಕ್ಷಾ ಸಮಯ ಆರಂಭವಾದರೂ ಅಕೌಂಟೆನ್ಸಿ ವಿಷಯದ ಪ್ರಶ್ನೆ ಪತ್ರಿಕೆಗಳು ಲಭ್ಯವಿಲ್ಲದೇ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪೇಚಿಗೆ ಸಿಲುಕಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಪ್ರಶ್ನೆ ಪತ್ರಿಕೆ ಯನ್ನು ಫ್ಯಾಕ್ಸ್ ಮೂಲಕ ತರಿಸಿಕೊಂಡು ಪರೀಕ್ಷಾರ್ಥಿಗಳಿಗೆ ಹಂಚುವ ಮೂಲಕ ಪರೀಕ್ಷೆ ನಡೆಸಿದರು.
‘ಅಕೌಂಟೆನ್ಸಿ ಪ್ರಶ್ನೆಪತ್ರಿಕೆಯು ಪಟ್ಟ ಣದ ಬೇರೊಂದು ಶಿಕ್ಷಣ ಸಂಸ್ಥೆಗೆ ಫ್ಯಾಕ್ಸ್ ಮೂಲಕ ಬಂದಿದ್ದು, ಬಳಿಕ ಪರೀಕ್ಷಾ ಕೇಂದ್ರದವರು ಅದನ್ನು ಜೆರಾಕ್ಸ್ ಮಾಡಿ ಪರೀಕ್ಷಾರ್ಥಿಗಳಿಗೆ ನೀಡಿದರು’ ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಯೊಬ್ಬರು ತಿಳಿಸಿದರು.
ಆದರೆ, ಪರೀಕ್ಷಾ ಕೇಂದ್ರದ ಸಿಬ್ಬಂದಿ ಈ ವಿಷಯವನ್ನು ಅಲ್ಲಗಳೆದರು. ‘ನೆರೆಯ ಹಗರಿ ಬೊಮ್ಮನಹಳ್ಳಿ ಕೇಂದ್ರದಿಂದ ಪ್ರಶ್ನೆಪತ್ರಿಕೆ ಬರುವುದು ಅರ್ಧ ಗಂಟೆ ವಿಳಂಬವಾಯಿತು. ನಂತರ ಪರೀಕ್ಷಾ ರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ಬರೆಯಿಸ ಲಾ ಯಿತು’ ಎಂದು ಹೇಳಿದರು.
ಪ್ರವೇಶ ಪತ್ರದಲ್ಲೂ ತಿದ್ದುಪಡಿ: ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರ ನೀಡುವಲ್ಲಿಯೂ ಲೋಪವಾಗಿದ್ದು, ಪರೀಕ್ಷಾ ಕೇಂದ್ರದ ಹೆಸರನ್ನು ಹೂವಿನಹಡಗಲಿಯ ಸೊಪ್ಪಿನ ಕಾಳಮ್ಮ ಬಾಲಕಿಯರ ಸಪಪೂ ಕಾಲೇಜು ಎಂದು ಮುದ್ರಿಸದೇ, ಕೊಟ್ಟೂರಿನ ಇಂದು ಪಪೂ ಕಾಲೇಜು ಎಂದು ತಪ್ಪು ನಮೂದಿಸಲಾಗಿದೆ. ಬಳಿಕ ಇಲ್ಲಿನ ಪರೀಕ್ಷಾ ಕೇಂದ್ರದ ಸಿಬ್ಬಂದಿ ಮೊಹರು ಹಾಕಿ, ತಿದ್ದುಪಡಿ ಮಾಡಿಕೊಟ್ಟರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.