ಫ್ಯಾಷನ್ ಶೋನಲ್ಲಿ ವಿನ್ಯಾಸಕರ ಪಾರುಪತ್ಯ...

7

ಫ್ಯಾಷನ್ ಶೋನಲ್ಲಿ ವಿನ್ಯಾಸಕರ ಪಾರುಪತ್ಯ...

Published:
Updated:

ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದ ಲಲನೆಯರನ್ನೇ  ನಾಚಿಸುವಂತಿದ್ದವು  ಆ ದಿರಿಸುಗಳು, `ಹೆಣ್ಣೆ ನೀ ನಂಗೆ ಸಾಟಿಯೇ~ ಎಂದು ಪೈಪೋಟಿಗೆ ಎಳೆಯುತ್ತಿದ್ದವು. ವಿನ್ಯಾಸಕಾರರ ಕೈಚಳಕದಿಂದ ಮೈದಳೆದ ಒಂದೊಂದು ಉಡುಪೂ ಕಣ್ಣು ಕುಕ್ಕುತ್ತಿದ್ದವು. ಈ ಉಡುಗೆ ಧರಿಸಿದ ವನಿತೆಯರು ತುಸು ಜಂಭದಿಂದ ಬೀಗುತ್ತಿದ್ದರು. ಹೀಗೆ ಕೆಲವೇ ನಿಮಿಷಗಳಲ್ಲಿ ಆ ಸಂಭ್ರಮ ಮುಗಿದೇ ಹೋಯಿತು.ಈ ಸಂಭ್ರಮವೆಲ್ಲಾ ಕಂಡುಬಂದಿದ್ದು `ಬೆಂಗಳೂರು ಫ್ಯಾಶನ್ ವೀಕ್~ನಲ್ಲಿ. ಎರಡು ಮತ್ತು ಮೂರನೇ ದಿನ ರೂಪದರ್ಶಿಗಳ ಉಡುಪುಗಳದ್ದೇ  ಪಾರುಪತ್ಯ. ವಿನ್ಯಾಸಕಾರರೆಲ್ಲರೂ ಆತ್ಮವಿಶ್ವಾಸದಿಂದಲೇ ತಮ್ಮ ಕಲೆಕ್ಷನ್‌ಗಳನ್ನು ಪ್ರದರ್ಶಿಸಿದರು.ವಿನ್ಯಾಸಕಿ ಮಹಂಜ್ ನೂರಾಣಿ ಅವರ ಆಕರ್ಷಕ `ಫೆಸ್ಟೀವ್ ಇಂಡಿಯನ್ ಟಚ್~ ಕಲೆಕ್ಷನ್‌ನಲ್ಲಿ ರೂಪಿತವಾದ ಗಾಢ ಬಣ್ಣದ ಅನಾರ್ಕಲಿ ಮತ್ತು ಲೆಹೆಂಗಾ ಉಡುಪುಗಳು ಮನೋಹರವಾಗಿದ್ದವು.ಶುಭಾಂಗಿ ಪಾಂಡೆ ಮತ್ತು ಮನ್‌ದೀಪ್ ಲಿತ್ತಾ ಟೈಪೋಗ್ರಫಿಯಲ್ಲಿ ವಿನ್ಯಾಸ ಮಾಡಿದ ತಮ್ಮ ಕಲೆಕ್ಷನ್‌ಗಳನ್ನು ಪ್ರದರ್ಶಿಸಿದರು. ಇಂಗ್ಲಿಷ್ ಅಕ್ಷರಗಳಲ್ಲಿ ಅವುಗಳನ್ನು ರೂಪಿಸಲಾಗಿತ್ತು.ಅಂತರರಾಷ್ಟ್ರೀಯ ವಿನ್ಯಾಸಕಾರ ಡೇನಿಯಲ್ ಯೂರೋಪಿನ ಸಾಂಪ್ರದಾಯಿಕ ಶೈಲಿಗೆ ಶರಣಾಗಿದ್ದರೆ, ಪಲ್ಲವಿ ಮಹೇಂದ್ರ ಅವರ ಉಡುಪುಗಳು `ಆರ್ಕ್~ ಎಂದು ಕರೆಯುವ ಸೆಮಿ ಫಾರ್ಮಲ್ ಲೈನ್‌ನಿಂದ ರೂಪಿತವಾಗಿದ್ದವು.ಎರಡನೇ ದಿನ ಅಬ್ದುಲ್ ಹಾಲ್ಡರ್ ವಿನ್ಯಾಸ ಮಾಡಿದ ವಿವಿಧ ನಮೂನೆಯ ಸಮ್ಮರ್/ರೆಸಾರ್ಟ್ ಉಡುಪುಗಳು ಆಕರ್ಷಕವಾಗಿದ್ದವು. ಮಹಿಳೆ ಮತ್ತು ಪುರುಷರ ಜಂಪ್ ಸೂಟ್ಸ್, ಮೈಗೆ ಅಂಟುವಂತಹ ಡ್ರೆಸ್‌ಗಳು, ಬಟನ್ ಪಾಕೆಟ್ ಶರ್ಟ್ಸ್, ರೇಷ್ಮೆ ಜಾಕೆಟ್ಸ್, ಕೋಟ್‌ಗಳು ಇವರ ವಿನ್ಯಾಸಕ್ಕೆ ಸಾಟಿ ಇಲ್ಲವೆನ್ನುತ್ತಿದ್ದವು.ಈಜುಪಟು ರೆಹನ್ ಪೂಂಚ ಅವರ ರ‌್ಯಾಂಪ್‌ವಾಕ್‌ನೊಂದಿಗೆ ಎರಡನೇ ದಿನದ ಪರದೆ ಸರಿಯಿತು.ಬೆಂಗಳೂರು ಮೂಲದ ವಿನ್ಯಾಸಕರಾದ ನೀಮಾ ಕುಮಾರ್ ಮತ್ತು ರಮೇಶ್ ದೆಂಬಲ್ ಕಲೆಕ್ಷನ್‌ಗಳು ಮೂರನೇ ದಿನದ ಪ್ರದರ್ಶನಕ್ಕೆ ಮೆರುಗು ನೀಡಿದ್ದವು.ಸೌತ್ ಆಫ್ರಿಕಾದ ವಿನ್ಯಾಸಕಾರ ಮುಸ್ತಾಫಾ ಅಸನ್ ಆಲಿ ವಿನ್ಯಾಸ ಮಾಡಿದ್ದ ಆಫ್ರಿಕಾದ ಸಾಂಪ್ರದಾಯಿಕ ಉಡುಪುಗಳು ಎಲ್ಲರ ಗಮನ ಸೆಳೆದವು. ತಾಂಜೇನಿಯಾಕ್ಕೆ ಸ್ವಾತಂತ್ರ್ಯ ದೊರತು ಐದು ದಶಕಗಳು ಸರಿದ ಸಂಭ್ರಮವೇ ಇವರ ವಿನ್ಯಾಸಕ್ಕೆ ಪ್ರೇರಣೆಯಂತೆ.

ನಟಿ ಕುಲ್‌ರಾಜ್ ರಮೇಶ್ ದೆಂಬಲ್ ಅವರ ವಿನ್ಯಾಸದ ಉಡುಪು ಧರಿಸಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

 

`ನಾನು ಬಹುದಿನಗಳ ಬಳಿಕ ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದು, ಇದು ಒಳ್ಳೆಯ ಅನುಭವ, ಈ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದೇನೆ. ಈ ಸಂತಸವನ್ನು ವಿವರಿಸಲಾಗದು~ ಎನ್ನುವಾಗ ಕುಲ್‌ರಾಜ್ ಕಣ್ಣಲ್ಲಿ ಮಿಂಚು.ಮುಂಬೈ ಮೂಲದ ವಿನ್ಯಾಸಕಿ ಸ್ವಪ್ನಾಲಿ ಶಿಂಧೆ ತಮ್ಮ ನೂತನ ಕಲೆಕ್ಷನ್‌ಗಳನ್ನು ಪ್ರದರ್ಶಿಸುವ ಮೂಲಕ ಮೂರನೇ ದಿನದ ಫ್ಯಾಶನ್ ಪಯಣಕ್ಕೆ ತೆರೆಬಿತ್ತು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry