ಭಾನುವಾರ, ಏಪ್ರಿಲ್ 18, 2021
29 °C

ಫ್ರಾನ್ಸ್ ದೇಶದ ವ್ಯಂಗ್ಯಚಿತ್ರ ಮೇಳಕ್ಕೆ ಕನ್ನಡಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫ್ರಾನ್ಸ್ ದೇಶದ ಸೇಂಜೂಸ್ ಲ್ ಮಾಟೆಲ್‌ನಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ 31ನೇ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಮೇಳಕ್ಕೆ ನಗರದ ವ್ಯಂಗ್ಯಚಿತ್ರಕಾರ ವಸಂತ ಹೊಸಬೆಟ್ಟು ಅವರು ಆಹ್ವಾನಿತರಾಗಿದ್ದಾರೆ.ಸೇಂಜೂಸ್ ಲ್ ಮಾಟೆಲ್ ವ್ಯಂಗ್ಯಚಿತ್ರಗಳ ರಾಜಧಾನಿ ಎಂದೇ ಪ್ರಸಿದ್ಧಿಯಾಗಿದೆ. ಅಲ್ಲಿ ಮೂವತ್ತು ವರ್ಷಗಳಿಂದ ಈ ಮೇಳವನ್ನು ಸಂಘಟಿಸಲಾಗುತ್ತಿದೆ. ಈ ಬಾರಿಯ ಮೇಳದಲ್ಲಿ ವಸಂತ ಅವರು ಫ್ರೆಂಚ್ ವಿದ್ಯಾರ್ಥಿಗಳಿಗಾಗಿ ಶಿಬಿರ ನಡೆಸಿಕೊಡಲಿದ್ದಾರೆ.ವಸಂತ ಅವರು ವ್ಯಂಗ್ಯಚಿತ್ರ ಶಿಬಿರದ ಜವಾಬ್ದಾರಿ ಪಡೆದ ಪ್ರಥಮ ಭಾರತೀಯ ವ್ಯಂಗ್ಯಚಿತ್ರಕಾರರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.